ಕಾಂಗ್ರೆಸ್ ದಲಿತರನ್ನು 'ಬಲಿಪಶು'ಗಳನ್ನಾಗಿ ಮಾಡಿದೆ: ಪಕ್ಷದ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಬಗ್ಗೆ ಮಾಯಾವತಿ

ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದ ಒಂದು ದಿನದ ನಂತರ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಗುರುವಾರ '137 ವರ್ಷಗಳ ಹಿಂದಿನ ಪಕ್ಷವು ತನ್ನ ಕೆಟ್ಟ ಕಾಲದಲ್ಲಿ ಮಾತ್ರ ದಲಿತರನ್ನು ನೆನಪಿಸಿಕೊಳ್ಳುತ್ತದೆ ಮತ್ತು ಅವರನ್ನು 'ಬಲಿಪಶು'ಗಳನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮಾಯಾವತಿ
ಮಾಯಾವತಿ

ಲಖನೌ: ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದ ಒಂದು ದಿನದ ನಂತರ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಗುರುವಾರ '137 ವರ್ಷಗಳ ಹಿಂದಿನ ಪಕ್ಷವು ತನ್ನ ಕೆಟ್ಟ ಕಾಲದಲ್ಲಿ ಮಾತ್ರ ದಲಿತರನ್ನು ನೆನಪಿಸಿಕೊಳ್ಳುತ್ತದೆ ಮತ್ತು ಅವರನ್ನು 'ಬಲಿಪಶು'ಗಳನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ದಲಿತ ನಾಯಕ ಖರ್ಗೆ (80) ನಾಲ್ಕು ದಿನಗಳ ಹಿಂದೆ ನಡೆದ ಐತಿಹಾಸಿಕ ಚುನಾವಣೆಯಲ್ಲಿ ತಮ್ಮ 66 ವರ್ಷದ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಸೋಲಿಸಿ 24 ವರ್ಷಗಳ ಬಳಿಕ ಕಾಂಗ್ರೆಸ್‌ನ ನೇತೃತ್ವ ವಹಿಸಿದ ಮೊದಲ ಗಾಂಧಿಯೇತರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ ಅವರು, 'ದೀನದಲಿತರಾದ ಪರಮಪೂಜ್ಯ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಮತ್ತು ಅವರ ಸಮಾಜವನ್ನು ಯಾವತ್ತೂ ಕಡೆಗಣಿಸಿದೆ/ತಿರಸ್ಕರಿಸಿದೆ ಎನ್ನುವುದಕ್ಕೆ ಕಾಂಗ್ರೆಸ್‌ನ ಇತಿಹಾಸವೇ ಸಾಕ್ಷಿ. ಈ ಪಕ್ಷವು ತನ್ನ ಒಳ್ಳೆಯ ದಿನಗಳಲ್ಲಿ ದಲಿತರ ಸುರಕ್ಷತೆ ಮತ್ತು ಗೌರವವನ್ನು ನೆನಪಿಸಿಕೊಳ್ಳುವುದಿಲ್ಲ. ಆದರೆ, ಕೆಟ್ಟ ದಿನಗಳಲ್ಲಿ ಅವರನ್ನು ಬಲಿಪಶುವನ್ನಾಗಿ ಮಾಡುತ್ತದೆ' ಎಂದು ದೂರಿದ್ದಾರೆ.

'ಕಾಂಗ್ರೆಸ್ ಪಕ್ಷವು ದೀರ್ಘಾವಧಿಯಲ್ಲಿ ದಲಿತೇತರರನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತದೆ ಮತ್ತು ಕೆಟ್ಟ ದಿನಗಳಲ್ಲಿ ಮಾತ್ರ ದಲಿತರನ್ನು ಮುಂದಿಡುತ್ತದೆ. ಇದು ಮೋಸ ಮತ್ತು ಹುಸಿ ರಾಜಕೀಯವಲ್ಲವೇ? ಜನರು ಕೇಳುತ್ತಾರೆ, 'ಇದು ದಲಿತರ ಕಡೆಗಿನ ಕಾಂಗ್ರೆಸ್‌ನ ನಿಜವಾದ ಪ್ರೀತಿಯೇ? ಎಂದು ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಗಾಂಧಿ ಕುಟುಂಬದ ನಿಷ್ಠಾವಂತರು ಎಂದೇ ಪರಿಗಣಿಸಲ್ಪಟ್ಟಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅಕ್ಟೋಬರ್ 26 ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ಪಕ್ಷವನ್ನು ಬಿಕ್ಕಟ್ಟಿನಿಂದ ಹೊರತರಬೇಕಿರುವ ಸವಾಲು ಖರ್ಗೆ ಅವರ ಮುಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com