ಕೇರಳ ವಿಶ್ವವಿದ್ಯಾನಿಲಯ ವಿವಾದ: ರಾಜ್ಯಪಾಲರ ರಾಜೀನಾಮೆ ಸೂಚನೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಉಪಕುಲಪತಿಗಳು

ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರ ರಾಜೀನಾಮೆ ಸೂಚನೆಯನ್ನು ಪ್ರಶ್ನಿಸಿ ಕೇರಳದ 9 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌.
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌.

ನವದೆಹಲಿ: ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರ ರಾಜೀನಾಮೆ ಸೂಚನೆಯನ್ನು ಪ್ರಶ್ನಿಸಿ ಕೇರಳದ 9 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಕುಲಪತಿಗಳ ಮನವಿ ಹಿನ್ನೆಲೆಯಲ್ಲಿ ನ್ಯಾಯಾಲಯವು ಇಂದು ಸಂಜೆ 4 ಗಂಟೆಗೆ ಅರ್ಜಿ ಪರಿಗಣನೆ ಕುರಿತು ಆದೇಶ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. 

ಈ ನಡುವೆ, ಕೇರಳದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ರಾಜೀನಾಮೆಗೆ ಆದೇಶ ನೀಡಿದ ರಾಜ್ಯಪಾಲ ಆರಿಫ್ ಎಂ ಖಾನ್ ವಿರುದ್ಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಪಾಲರು (ಆರಿಫ್ ಎಂ ಖಾನ್) ಕುಲಪತಿ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಅಧಿಕಾರಕ್ಕಿಂತ ಹೆಚ್ಚಿನ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಕುಲಪತಿಗಳ ಅಧಿಕಾರದ ಮೇಲಿನ ಅತಿಕ್ರಮಣವಾಗಿದೆ. ಗವರ್ನರ್ ಹುದ್ದೆಯು ಸರ್ಕಾರದ ವಿರುದ್ಧ ನಡೆಯುವುದಾಗಬಾರದು. ಸರ್ಕಾರವನ್ನು ಎತ್ತಿ ಹಿಡಿಯಬೇಕು. ರಾಜ್ಯಪಾಲರು ಆರ್‌ಎಸ್‌ಎಸ್‌ನ ಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿಯ ಉಪಕುಲಪತಿ ನೇಮಕವನ್ನು ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರು 9 ವಿವಿಗಳ ಉಪಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. 

ವಿವಿಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು ಸೋಮವಾರ ಬೆಳಿಗ್ಗೆ 11.30 ರ ವೇಳೆಗೆ ಉಪಕುಲಪತಿಗಳ ರಾಜೀನಾಮೆ ತಮಗೆ ತಲುಪಬೇಕು ಎಂದೂ ನಿರ್ದೇಶನ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com