ಗುಜರಾತ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಮರಳಿ ತರುತ್ತದೆ: ರಾಹುಲ್ ಗಾಂಧಿ

ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗುತ್ತಿಗೆ ಕಾರ್ಮಿಕರಿಗೆ ಸ್ಥಿರ ಉದ್ಯೋಗಗಳನ್ನು ಒದಗಿಸಲಿದೆ, ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಹಿಂಪಡೆಯಲಿದೆ ಮತ್ತು ಸಕಾಲಕ್ಕೆ ಬಡ್ತಿ ಸಿಗುವಂತೆ ನೋಡಿಕೊಳ್ಳುತ್ತದೆ ಎಂದು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗುತ್ತಿಗೆ ಕಾರ್ಮಿಕರಿಗೆ ಸ್ಥಿರ ಉದ್ಯೋಗಗಳನ್ನು ಒದಗಿಸಲಿದೆ, ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಹಿಂಪಡೆಯಲಿದೆ ಮತ್ತು ಸಕಾಲಕ್ಕೆ ಬಡ್ತಿ ಸಿಗುವಂತೆ ನೋಡಿಕೊಳ್ಳುತ್ತದೆ ಎಂದು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ಗುತ್ತಿಗೆ ಕಾರ್ಮಿಕರಿಗೆ ಸ್ಥಿರ ಉದ್ಯೋಗಗಳು, ಹಳೆಯ ಪಿಂಚಣಿ ಯೋಜನೆ ಮತ್ತು ಸಕಾಲಿಕ ಬಡ್ತಿಗಳನ್ನು ಮರಳಿ ತರುವುದು' ಕಾಂಗ್ರೆಸ್‌ನ ದೃಢವಾದ ಭರವಸೆಯಾಗಿದೆ ಎಂದು ಹೇಳಿದ್ದಾರೆ.

'ಇದನ್ನು ಈಗಾಗಲೇ ರಾಜಸ್ಥಾನದಲ್ಲಿ ಜಾರಿಗೊಳಿಸಲಾಗಿದೆ. ಈಗ ಗುಜರಾತಿನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ ನೌಕರರು ತಮ್ಮ ಬಾಕಿ ವೇತನವನ್ನು ಪಡೆಯುತ್ತಾರೆ' ಎಂದು ರಾಹುಲ್ ಗಾಂಧಿ 'ಕಾಂಗ್ರೆಸ್ ದೇಗಿ ಪಕ್ಕಿ ನೌಕ್ರಿ' ಹ್ಯಾಶ್‌ಟ್ಯಾಗ್ ಬಳಸಿ ತಿಳಿಸಿದ್ದಾರೆ.

ಸದ್ಯದಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದೆ.

ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ

ಐದನೇ ದಿನವಾದ ಭಾನುವಾರ ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಮುಂದುವರೆಸಿದ್ದಾರೆ. ಮೆಹಬೂಬ್‌ನಗರ ಜಿಲ್ಲೆಯ ಜೆಡ್ಚೆರ್ಲಾ ಮಂಡಲದ ಗೊಲ್ಲಪಲ್ಲಿಯಿಂದ ಪಾದಯಾತ್ರೆಯನ್ನು ಪುನರಾರಂಭಿಸಲಾಯಿತು.

ವಿವಿಧ ವರ್ಗದ ಜನರೊಂದಿಗೆ ರಾಹುಲ್ ಸಂವಾದ ನಡೆಸಿದರು. ಯಾತ್ರೆಯ ವೇಳೆ ಮಕ್ಕಳೊಂದಿಗೆ ರಾಹುಲ್ ಓಡಿದ್ದು, ನೆರೆದಿದ್ದವರಲ್ಲಿ ಸಂತಸಕ್ಕೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com