ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಟ್ವಿಟರ್ ನಲ್ಲಿ ಆಕ್ಷೇಪರ್ಹಾ ಹೇಳಿಕೆಯ ಫೋಸ್ಟ್ ಹಾಕಿದ ಆರೋಪದ ಮೇರೆಗೆ ಅಹಮದ್ ನಗರದ ವಿಶ್ವವಿದ್ಯಾಲಯದ 29 ವರ್ಷದ ಪಿ.ಹೆಚ್.ಡಿ ವಿದ್ಯಾರ್ಥಿಯೊಬ್ಬನನ್ನು ಮಹಾರಾಷ್ಟ್ರ ಸೈಬರ್ ವಿಭಾಗದ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಟ್ವಿಟರ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆಕ್ಷೇಪರ್ಹಾ ಹೇಳಿಕೆ ಫೋಸ್ಟ್ ಮಾಡಿರುವ ಬಗ್ಗೆ ಅಕ್ಟೋಬರ್ 14 ರಂದು ಸೈಬರ್ ವಿಭಾಗದ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆರೋಪಿ ಮಹಿಳಾ ಪ್ರತ್ರಕರ್ತೆಯರನ್ನು ಕೂಡಾ ನಿಂದಿಸಿದ್ದ ಎಂದು ಅವರು ಹೇಳಿದ್ದಾರೆ.
ಆರೋಪಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ವರ್ಚುಯಲ್ ಪ್ರೈವೇಟ್ ನೆಟ್ ವರ್ಕ್ ಬಳಸಿದ್ದ ಮತ್ತು ಮುಂಬೈಯಿಂದ ಅದನ್ನು ಪೋಸ್ಟ್ ಮಾಡಿರುವುದಾಗಿ ತೋರಿಸಲು ಪ್ರಯತ್ನಿಸಿದ್ದ, ಟ್ವಿಟ್ ನ ತಾಂತ್ರಿಕತೆಯನ್ನು ಸೈಬರ್ ವಿಭಾಗದ ಪೊಲೀಸರು ವಿಶ್ಲೇಷಿಸಿದ ಬಳಿಕ ಅದನ್ನು ಅಹಮದ್ ನಗರದ ಮಹಾತ್ಮ ಪುಲೆ ಕೃಷಿ ವಿವಿಯಿಂದ ಮಾಡಲಾದ ಪೋಸ್ಟ್ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಎರಡು ಮೊಬೈಲ್ ಫೋನ್ , ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದು, ಶನಿವಾರ ಮುಂಬೈನ ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದ್ದು, ನವೆಂಬರ್ 2ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement