ಕ್ಷಿಪಣಿ ಉಡಾವಣೆ (ಸಂಗ್ರಹ ಚಿತ್ರ)
ದೇಶ
ಮೇಲ್ಮೈ ನಿಂದ ಆಗಸಕ್ಕೆ ಚಿಮ್ಮುವ QRSAM ಕ್ಷಿಪಣಿ ವ್ಯವಸ್ಥೆ ಪರೀಕ್ಷೆ ಯಶಸ್ವಿ
ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ತ್ವರಿತ ಪ್ರತಿಕ್ರಿಯೆಯ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಯಶಸ್ವಿಯಾಗಿ ಉಡಾಯಿಸಿದೆ.
ಒಡಿಶಾ: ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ತ್ವರಿತ ಪ್ರತಿಕ್ರಿಯೆಯ ಕ್ಷಿಪಣಿ ವ್ಯವಸ್ಥೆ (QRSAM)ಯನ್ನು ಭಾರತ ಯಶಸ್ವಿಯಾಗಿ ಉಡಾಯಿಸಿದೆ.
ಒಡಿಶಾದ ಕಡಲ ತೀರದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಉಡಾವಣೆ ಮಾಡಲಾಗಿದ್ದು, ಸೇನೆ ಹಾಗೂ ಡಿಆರ್ ಡಿಒ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ ಈ ಪ್ರಯೋಗ ನಡೆದಿದೆ.
ಗರಿಷ್ಠ ಮಟ್ಟದ ವೇಗದ ವೈಮಾನಿಕ ಟಾರ್ಗೆಟ್ ಗಳ ವಿರುದ್ಧ ಈ ಪ್ರಯೋಗ ನಡೆಸಲಾಗಿದ್ದು, ಹಲವು ವಿಧದ ಅಪಾಯಗಳನ್ನು ಕೃತಕವಾಗಿ ಸೃಷ್ಟಿಸಿ ಕ್ಷಿಪಣಿ ವ್ಯವಸ್ಥೆಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. ಕ್ಷಿಪಣಿ ವ್ಯವಸ್ಥೆ ನಿರೀಕ್ಷಿತ ಫಲಿತಾಂಶವನ್ನು ನೀಡಿದೆ ಎಂದು ಡಿಆರ್ ಡಿಒ ಹೇಳಿದೆ.
ಸರ್ಚ್-ಟ್ರ್ಯಾಕ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು ಈ QRSAM ಶಸ್ತ್ರಾಸ್ತ್ರ ವ್ಯವಸ್ಥೆಯ ವೈಶಿಷ್ಟ್ಯವಾಗಿದೆ ಎಂದು ಡಿಆರ್ ಡಿಒ ಹೇಳಿದೆ. ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ