ಜಿಎಸ್ ಟಿ ಕಲೆಕ್ಷನ್ ನಲ್ಲಿ  ಶೇ. 28 ರಷ್ಟು ಏರಿಕೆ, ರೂ. 1. 49 ಲಕ್ಷ ಕೋಟಿ ಸಂಗ್ರಹ

ಆರ್ಥಿಕ ಚೇತರಿಕೆ ಮತ್ತು ತೆರಿಗೆ ವಂಚನೆ ತಡೆಗೆ ಕ್ರಮಗಳನ್ನು ತೆಗೆದುಕೊಂಡ ನಂತರ ಜುಲೈ ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಶೇಕಡಾ 28 ರಷ್ಟು ಏರಿಕೆಯಾಗಿದ್ದು,  ರೂ. 1.49 ಲಕ್ಷ ಕೋಟಿಗೆ ತಲುಪಿದೆ.
ಜಿಎಸ್ ಟಿ ಸಾಂದರ್ಭಿಕ ಚಿತ್ರ
ಜಿಎಸ್ ಟಿ ಸಾಂದರ್ಭಿಕ ಚಿತ್ರ

ನವದೆಹಲಿ: ಆರ್ಥಿಕ ಚೇತರಿಕೆ ಮತ್ತು ತೆರಿಗೆ ವಂಚನೆ ತಡೆಗೆ ಕ್ರಮಗಳನ್ನು ತೆಗೆದುಕೊಂಡ ನಂತರ ಜುಲೈ ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಶೇಕಡಾ 28 ರಷ್ಟು ಏರಿಕೆಯಾಗಿದ್ದು,  ರೂ. 1.49 ಲಕ್ಷ ಕೋಟಿಗೆ ತಲುಪಿದೆ. ಇದು ಎರಡನೇ ಅತಿ ಹೆಚ್ಚಿನ ತೆರಿಗೆ ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

 ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 1, 16,393 ಕೋಟಿ ರೂಪಾಯಿಯಷ್ಟು ಜಿಎಸ್ ಟಿ ಸಂಗ್ರಹವಾಗಿತ್ತು. ಜುಲೈ 2017 ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪರಿಚಯಿಸಲಾಗಿದ್ದು, ಏಪ್ರಿಲ್ 2022 ರಲ್ಲಿ ಅತ್ಯಂತ ಹೆಚ್ಚಿನ 1.68 ಲಕ್ಷ ಕೋಟಿ ಆದಾಯ ಸಂಗ್ರಹವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com