ಮುಂಬೈ ಬಳಿ 1,400 ಕೋಟಿ ರೂ. ಮೊತ್ತದ ಮಾದಕ ವಸ್ತು ಜಪ್ತಿ: ಸ್ನಾತಕೋತ್ತರ ಪದವೀಧರ ಸೇರಿ ಐವರ ಬಂಧನ

ಮಹಾರಾಷ್ಟ್ರದ ಪಲ್ಗಾರ್ ಜಿಲ್ಲೆಯ ನಾಲಸೊಪಾರಾದ ಮಾದಕ ವಸ್ತು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು, ಐವರನ್ನು ಬಂಧಿಸಿ ಸುಮಾರು 1,400 ಕೋಟಿ ಮೊತ್ತದ 700 ಕಿಲೋಗ್ರಾಮ್ ಗೂ ಹೆಚ್ಚಿನ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ ಪಲ್ಗಾರ್ ಜಿಲ್ಲೆಯ ನಾಲಸೊಪಾರಾದ ಮಾದಕ ವಸ್ತು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು, ಐವರನ್ನು ಬಂಧಿಸಿ ಸುಮಾರು 1,400 ಕೋಟಿ ಮೊತ್ತದ 700 ಕಿಲೋಗ್ರಾಮ್ ಗೂ ಹೆಚ್ಚಿನ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ನಾಲಸೊಪಾರಾದಲ್ಲಿರುವ ಮಾದಕ ವಸ್ತು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಡ್ರಗ್ ಪೆಡ್ಲರ್ ಗಳಿಗೆ ಪೂರೈಕೆ ಮಾಡಲು ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಆರ್ಗ್ಯಾನಿಕ್ ಕೆಮಿಸ್ಟ್ರಿ ವಿಭಾಗದ ಸ್ನಾತಕೋತ್ತರ ಪದವೀಧರನೊಬ್ಬ ಪ್ರಮುಖ ಆರೋಪಿಯಾಗಿದ್ದಾನೆ. ಬಂಧಿತ ಇತರ ನಾಲ್ವರು ಆರೋಪಿಗಳ ಪೈಕಿ ಒಬ್ಬರು ಮಹಿಳೆಯಾಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಮಾದಕ ವಸ್ತು ಅಕ್ರಮ ಮಾರಾಟದಲ್ಲಿ ಮತ್ತಷ್ಟು ಮಂದಿ ತೊಡಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ ಎಂದು ಮಾದಕ ದ್ರವ್ಯ ನಿಗ್ರಹ ವಿಭಾಗದ ಡಿಸಿಪಿ ದತ್ತಾ ನಲ್ವಾಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com