ಕೋವಿಡ್-19: ದೇಶದಲ್ಲಿ 18,738 ಹೊಸ ಪ್ರಕರಣ, ಕಳೆದ 24 ಗಂಟೆಗಳಲ್ಲಿ ಕೊಂಚ ಇಳಿಕೆ
ದೇಶದಲ್ಲಿ ಭಾನುವಾರ ಕೋವಿಡ್-10 ಕೊಂಚ ತಗ್ಗಿದ್ದು 18 ಸಾವಿರದ 738 ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆ ಶನಿವಾರ ದೇಶದಲ್ಲಿ 19 ಸಾವಿರದ 406 ಪ್ರಕರಣಗಳು ವರದಿಯಾಗಿದ್ದವು.
Published: 07th August 2022 12:15 PM | Last Updated: 07th August 2022 12:15 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಭಾನುವಾರ ಕೋವಿಡ್-10 ಕೊಂಚ ತಗ್ಗಿದ್ದು 18 ಸಾವಿರದ 738 ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆ ಶನಿವಾರ ದೇಶದಲ್ಲಿ 19 ಸಾವಿರದ 406 ಪ್ರಕರಣಗಳು ವರದಿಯಾಗಿದ್ದವು.
ಈ ಮೂಲಕ ದೇಶದಲ್ಲಿ ಇದುವರೆಗೆ ಒಟ್ಟು ಕೇಸುಗಳ ಸಂಖ್ಯೆ 4 ಕೋಟಿಯ 41 ಲಕ್ಷದ 45 ಸಾವಿರದ 732 ವರದಿಯಾಗಿವೆ. ಇವುಗಳಲ್ಲಿ 1 ಲಕ್ಷದ 34 ಸಾವಿರದ 933 ಸಕ್ರಿಯವಾಗಿದ್ದು ಒಟ್ಟು ಕೇಸಿನ ಶೇಕಡಾ 0.31ರಷ್ಟಾಗಿದೆ.
ಗುಣಮುಖ ಹೊಂದುತ್ತಿರುವವರ ಪ್ರಮಾಣ ಈಗ ಶೇಕಡಾ 98.50ರಷ್ಟಾಗಿದ್ದು 18 ಸಾವಿರದ 558 ಮಂದಿ ಹೊಸದಾಗಿ ಗುಣಮುಖರಾಗಿದ್ದಾರೆ. ಈ ಮೂಲಕ ಇಲ್ಲಿಯವರೆಗೆ 4 ಕೋಟಿಯ 34 ಲಕ್ಷದ 84 ಸಾವಿರದ 110 ಮಂದಿ ಗುಣಮುಖರಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 3 ಲಕ್ಷದ 72 ಸಾವಿರದ 910 ಮಂದಿಯ ಪರೀಕ್ಷೆಗಳನ್ನು ನಡೆಸಲಾಗಿದ್ದು ದಿನಂಪ್ರತಿ ಕೊರೋನಾ ಪಾಸಿಟಿವ್ ದರ ಶೇಕಡಾ 5.02ರಷ್ಟಿದೆ. ವಾರದಲ್ಲಿ ಪಾಸಿಟಿವ್ ದರ ಶೇಕಡಾ 4.63ರಷ್ಟಿಗೆ.
ಕೋವಿಡ್ ಲಸಿಕೆ ಆರಂಭವಾದಾಗಿನಿಂದ 206.21 ಕೋಟಿ ಡೋಸ್ ಲಸಿಕೆಯನ್ನು ದೇಶಾದ್ಯಂತ ಅಭಿಯಾನದಲ್ಲಿ ನೀಡಲಾಗಿದೆ. 100 ಮಿಲಿಯನ್ ಗೂ ಅಧಿಕ ಮುನ್ನೆಚ್ಚರಿಕಾ ಬೂಸ್ಟರ್ ಡೋಸ್ ನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.