ಕ್ಯಾಬಿನೆಟ್, ಲೆಫ್ಟಿನೆಂಟ್ ಗವರ್ನರ್ ಅನುಮತಿ ಇಲ್ಲದೆಯೆ ಮದ್ಯದ ಲಾಬಿ ಪರ ಸಿಸೋಡಿಯಾ ನಿರ್ಧಾರ: ದೆಹಲಿ ಮುಖ್ಯ ಕಾರ್ಯದರ್ಶಿ ವರದಿ

ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಕಾರ್ಯದರ್ಶಿ ಮಹತ್ವದ ವರದಿ ನೀಡಿದ್ದು, ಸಿಸೋಡಿಯಾ ಸಚಿವ ಸಂಪುಟ ಮತ್ತು ಲೆಫ್ಟಿನೆಂಟ್ ಗವರ್ನರ್ ಅನುಮತಿ ಇಲ್ಲದೇ ಮದ್ಯದ ಲಾಬಿ ಪರ ನಿರ್ಧಾರಗಳನ್ನು ಕೈಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಮನಿಶ್ ಸಿಸೋಡಿಯಾ
ಮನಿಶ್ ಸಿಸೋಡಿಯಾ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಕಾರ್ಯದರ್ಶಿ ಮಹತ್ವದ ವರದಿ ನೀಡಿದ್ದು, ಸಿಸೋಡಿಯಾ ಸಚಿವ ಸಂಪುಟ ಮತ್ತು ಲೆಫ್ಟಿನೆಂಟ್ ಗವರ್ನರ್ ಅನುಮತಿ ಇಲ್ಲದೇ ಮದ್ಯದ ಲಾಬಿ ಪರ ನಿರ್ಧಾರಗಳನ್ನು ಕೈಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಮನೀಷ್ ಸಿಸೋಡಿಯಾ ಕ್ಯಾಬಿನೆಟ್, ಎಲ್-ಜಿ (ಲೆಫ್ಟಿನೆಂಟ್ ಗವರ್ನರ್) ಬೈಪಾಸ್ ಮಾಡಿ ಮದ್ಯದ ಲಾಬಿಗೆ ಸಹಾಯ ಮಾಡಿದರು. ಅವರ ಅನುಮತಿ ಇಲ್ಲದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆ ಮೂಲಕ ನೇರವಾಗಿಯೇ ಮದ್ಯದ ಲಾಬಿ ಪರ ಕೆಲಸ ಮಾಡಿದ್ದರು. ಸಿಸೋಡಿಯಾ ಅವರ ಈ ನಡೆ ಮದ್ಯ ಪರವಾನಗಿದಾರರಿಗೆ ಅನಿರೀಕ್ಷಿತ ಲಾಭವನ್ನು ಉಂಟುಮಾಡಿತು ಮತ್ತು ಸರ್ಕಾರಕ್ಕೆ ಆದಾಯ ನಷ್ಟವನ್ನು ಉಂಟುಮಾಡಿತು ಎಂದು ಹೇಳಲಾಗಿದೆ. ಈ ಕುರಿತು  ರಾಜ್ಯದ ಮುಖ್ಯ ವಿಜಿಲೆನ್ಸ್ ಅಧಿಕಾರಿಯೂ ಆಗಿರುವ ದೆಹಲಿ ಮುಖ್ಯ ಕಾರ್ಯದರ್ಶಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರಿಗೆ ವರದಿ ಮೂಲಕ ತಿಳಿಸಿದ್ದಾರೆ. 

ಇನ್ನು ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭಾಗಿಯಾಗಿದ್ದಾರೆ. ಎಎಪಿ ಸರ್ಕಾರ ಮದ್ಯದ ಪರವಾನಗಿದಾರರಿಗೆ ಅಕ್ರಮ ಲಾಭವನ್ನು ವಿಸ್ತರಿಸಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಆರೋಪಿಸಿದ್ದಾರೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಎಲ್-ಜಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. 

ಇದೀಗ ಮುಖ್ಯಕಾರ್ಯದರ್ಶಿಗಳು ತಮ್ಮ ವರದಿ ನೀಡಿದ್ದು, 'ಸಿಸೋಡಿಯಾ ಮತ್ತು ಅವರ ನೇತೃತ್ವದ ಅಬಕಾರಿ ಇಲಾಖೆ ಕೈಗೊಂಡ ಏಕಪಕ್ಷೀಯ ನಿರ್ಧಾರಗಳಿಂದ ಬೊಕ್ಕಸಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಸಿಸೋಡಿಯಾ ಅವರು ಕ್ಯಾಬಿನೆಟ್ ಮತ್ತು ಎಲ್-ಜಿಯ ಅಗತ್ಯ ಅನುಮೋದನೆಯನ್ನು ಪಡೆಯದೆ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾದ ನಿರ್ಧಾರಗಳಲ್ಲಿ ಬಿಯರ್ ಮೇಲಿನ "ಆಮದು ಪಾಸ್ ಶುಲ್ಕವನ್ನು ತೆಗೆದುಹಾಕುವುದು" ಮತ್ತು "ವಿದೇಶಿ ಮದ್ಯದ ದರಗಳ ಲೆಕ್ಕಾಚಾರವನ್ನು ಪರಿಷ್ಕರಿಸುವುದು" ಸೇರಿವೆ. ಇದಲ್ಲದೆ ವಿದೇಶಿ ಮದ್ಯದ ದರಗಳ ಲೆಕ್ಕಾಚಾರದ ಸೂತ್ರವನ್ನು ಪರಿಷ್ಕರಿಸಲು ಮತ್ತು ಆಮದು ಪಾಸ್ ಅನ್ನು ತೆಗೆದುಹಾಕಲು ದಿನಾಂಕ 08-11-2021 ರ ಆದೇಶವನ್ನು ಹೊರಡಿಸುವ ಮೊದಲು ಅಬಕಾರಿ ಇಲಾಖೆಯ ಅಧಿಕಾರಿಗಳು ಮಂತ್ರಿಗಳ ಮಂಡಳಿಯ ಅನುಮೋದನೆಯನ್ನು ಅಥವಾ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರ ಅಭಿಪ್ರಾಯವನ್ನು ತೆಗೆದುಕೊಂಡಿಲ್ಲ. ಬಿಯರ್ ಮೇಲೆ ಪ್ರತಿ ಪ್ರಕರಣಕ್ಕೆ 50 ಶುಲ್ಕ. ಸಗಟು ಬೆಲೆಯಲ್ಲಿ ಅಂತಹ ಕಡಿತ ಮಾಡಲಾಗಿದೆ, ಚಿಲ್ಲರೆ ಪರವಾನಗಿದಾರರಿಗೆ (L7Z) ಬಿಯರ್ ಮತ್ತು ವಿದೇಶಿ ಮದ್ಯದ ಇನ್‌ಪುಟ್ ವೆಚ್ಚವನ್ನು ಕಡಿಮೆ ಮಾಡಲಾಗಿದೆ ಎಂದು ವರದಿ ಹೇಳಿದೆ.

ಸರ್ಕಾರದ ನಡೆಯಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಿದ್ದ ಸಾಕಷ್ಟು ಹಣ ನಷ್ಟವಾಗಿದೆ. ಮದ್ಯ ಪರವಾನಗಿದಾರರು ಸರ್ಕಾರಕ್ಕೆ ಪಾವತಿಸಬೇಕಾದ ಹೆಚ್ಚಿನ ಪರವಾನಗಿ ಶುಲ್ಕ ಕಡಿತವಾಗಿದೆ ಎಂದು ಆರೋಪಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com