ಗೋ ಕಳ್ಳಸಾಗಣೆ ಪ್ರಕರಣ: ಹಣಕ್ಕಾಗಿ ಅಪರಾಧಿಗಳಿಗೆ ಅನುಬ್ರತಾ ಮೊಂಡಲ್ ರಕ್ಷಣೆ- ಸಿಬಿಐ
ಗೋ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮೊಂಡಲ್ ಹಣಕ್ಕಾಗಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದರು ಎಂದು ಸಿಬಿಐ ಹೇಳಿದೆ.
Published: 11th August 2022 10:20 PM | Last Updated: 12th August 2022 12:57 PM | A+A A-

ಅನುಬ್ರತಾ ಮೊಂಡಲ್ ಬಂಧನ (
ನವದೆಹಲಿ: ಗೋ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮೊಂಡಲ್ ಹಣಕ್ಕಾಗಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದರು ಎಂದು ಸಿಬಿಐ ಹೇಳಿದೆ.
ರಕ್ಷಣೆ ನೀಡುತ್ತಿದ್ದದ್ದಕ್ಕೆ ನಿಯಮಿತವಾಗಿ ಅಪರಾಧಿಗಳಿಂದ ಅನುಬ್ರತಾ ಮೊಂಡಲ್ ಹಣ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.
ಮೊಂಡಲ್, ಈಗ ನಾಪತ್ತೆಯಾಗಿರುವ ಟಿಎಂಸಿ ನಾಯಕ ವಿನಯ್ ಮಿಶ್ರಾ ಅವರ ಸಹೋದರ ವಿಕಾಸ್ ಮಿಶ್ರಾ ಗೋ ಕಳ್ಳಸಾಗಣೆ ಮಾಡುತ್ತಿದ್ದ ಎನಾಮುಲ್ ಹಕ್ ಹಾಗೂ ಆತನ ಸಹಚರರಿಗೆ ರಕ್ಷಣೆ ನೀಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಜಾನುವಾರು ಕಳ್ಳಸಾಗಣೆ ಪ್ರಕರಣ: ಮಮತಾ ಬ್ಯಾನರ್ಜಿ ಆಪ್ತ ಸಹಾಯಕನನ್ನು ಬಂಧಿಸಿದ ಸಿಬಿಐ
ಭಾರತ-ಬಾಂಗ್ಲಾ ಗಡಿ ಭಾಗದ ಇಲಾಮ್ ಬಜಾರ್ ನಿಂದ ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು, ಈ ರೀತಿ ಮಾಡುತ್ತಿದ್ದಾಗ ತಮ್ಮ ಕೆಲಸ ಸುಲಭವಾಗಿ ನಡೆಯುವುದಕ್ಕಾಗಿ, ಗೋವುಗಳನ್ನು ಬಾಂಗ್ಲಾದೇಶಕ್ಕೆ ಸಾಗಣೆ ಮಾಡಲು ಕೆಲವು ಬಿಎಸ್ಎಫ್ ಅಧಿಕಾರಿಗಳ ಕೃಪಾಕಟಾಕ್ಷವನ್ನೂ ಅವರು ಬಳಕೆ ಮಾಡಿಕೊಳ್ಳುತ್ತಿದ್ದರು, ಈ ಪೈಕಿ ಈಗಾಗಲೇ ಆರೋಪ ಪಟ್ಟಿಯಲ್ಲಿರುವ ಸತೀಶ್ ಕುಮಾರ್ ಸಹ ಇದ್ದಾರೆ ಎಂದು ಸಿಬಿಐ ಹೇಳಿದೆ.