
ಸಿಜೆಐ ಎನ್ ವಿ ರಮಣ
ನವದೆಹಲಿ: ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವು ಸಾಂವಿಧಾನಿಕ ನಂಬಿಕೆಯ 'ಸಮಾನ ಭಂಡಾರಗಳು' ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಸೋಮವಾರ ಹೇಳಿದ್ದಾರೆ ಮತ್ತು ನ್ಯಾಯ ನೀಡಿಕೆ ನ್ಯಾಯಾಲಯಗಳ ಜವಾಬ್ದಾರಿಯಾಗಿದೆ ಎಂಬ ಕಲ್ಪನೆಯನ್ನು ಸಂವಿಧಾನ ಹೊರಹಾಕುತ್ತದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ 75ನೇ ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ನೀತಿಯ ನಿರ್ದೇಶನ ತತ್ವಗಳ ಕುರಿತು ಸಂವಿಧಾನದ 38 ನೇ ವಿಧಿಯನ್ನು ಉಲ್ಲೇಖಿಸಿ, ಸಾಮಾಜಿಕ ಸುವ್ಯವಸ್ಥೆಯನ್ನು ಭದ್ರಪಡಿಸುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಾಂವಿಧಾನಿಕ ಚೌಕಟ್ಟಿನಡಿಯಲ್ಲಿ, ಪ್ರತಿಯೊಂದು ಅಂಗಕ್ಕೂ ಒಂದು ಬಾಧ್ಯತೆ ನೀಡಲಾಗಿದೆ ಮತ್ತು ನ್ಯಾಯವು ನ್ಯಾಯಾಲಯಗಳ ಏಕೈಕ ಜವಾಬ್ದಾರಿಯಾಗಿದೆ ಎಂಬ ಕಲ್ಪನೆಯನ್ನು ಭಾರತೀಯ ಸಂವಿಧಾನದ 38 ನೇ ವಿಧಿಯಲ್ಲಿ ಹೇಳಲಾಗಿದೆ. ರಾಜ್ಯಗಳು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸುವುದನ್ನು ಸಂವಿಧಾನ ಕಡ್ಡಾಪಡಿಸಿದೆ ಎಂದರು.
ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ - ಸಾಂವಿಧಾನಿಕ ನಂಬಿಕೆಯ ಸಮಾನ ಭಂಡಾರಗಳು, ವಿವಾದಗಳನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ನಾಗರಿಕರಿಗೆ ಶಕ್ತಿ ನೀಡುತ್ತದೆ ಮತ್ತು ವಿಷಯಗಳು ತಪ್ಪಾದಾಗ ಅದು ತಮ್ಮೊಂದಿಗೆ ನಿಲ್ಲುತ್ತದೆ ಎಂಬುದು ಅವರಿಗೆ ಗೊತ್ತಿದೆ ಎಂದು ಅವರು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯು ಲಿಖಿತ ಸಂವಿಧಾನದ ಬದ್ಧತೆಯಿಂದ ಸಾಗುತ್ತದೆ ಮತ್ತು ಜನರಲ್ಲಿ ಅಪಾರ ನಂಬಿಕೆಯನ್ನು ಹೊಂದಿದೆ ಎಂದು ಅವರು ಹೇಳಿದರು.