ಇನ್ನೂ 6 ತಿಂಗಳೊಳಗೆ ಇಡಿ, ಸಿಬಿಐ ಎರಡೂ ಸೇರಿ ತೃಣಮೂಲ ಕಾಂಗ್ರೆಸ್ ಮುಗಿಸಲಿವೆ: ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಂದಿನ ಆರು ತಿಂಗಳ ಕಾಲವೂ ಆಡಳಿತ ನಡೆಸಲಾಗದು ಎಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಗುರುವಾರ ಹೇಳಿದ್ದಾರೆ.
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ

ಕೊಲ್ಕತಾ:  ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಂದಿನ ಆರು ತಿಂಗಳ ಕಾಲವೂ ಆಡಳಿತ  ನಡೆಸಲಾಗದು ಎಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಗುರುವಾರ ಹೇಳಿದ್ದಾರೆ.

ಮುಂದಿನ ಆರು ತಿಂಗಳಲ್ಲಿ ಹೊಸ ಮತ್ತು ಸುಧಾರಿತ ಟಿಎಂಸಿ ಬರಲಿದೆ ಎಂಬ ಟಿಎಂಸಿ ಹೇಳಿಕೆಯ ಫೋಸ್ಟರ್ ಕುರಿತು ಪ್ರತಿಕ್ರಿಯಿಸಿರುವ ಸುವೇಂದು, ಇಡಿ ಮತ್ತು ಸಿಬಿಐ ತನ್ನ ಕೆಲಸವನ್ನು ಮಾಡುತ್ತಿವೆ. ಟಿಎಂಸಿ ಇನ್ನೂ ಆರು ತಿಂಗಳವರೆಗೂ ಆಡಳಿತ ನಡೆಸಲ್ಲ, ಡಿಸೆಂಬರ್ ಅವರ ಡೆಡ್ ಲೈನ್ ಆಗಿದೆ ಎಂದು ಅಧಿಕಾರಿ ಪೂರ್ವ ಮಿಡ್ನಾಪುರದಲ್ಲಿ ತಿಳಿಸಿದರು.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮುಖಂಡರ ಮೇಲಿನ ಇತ್ತೀಚಿನ ಇಡಿ ದಾಳಿಯನ್ನು ಅವರು ಉಲ್ಲೇಖಿಸಿದರು. ಮಮತಾ ಬ್ಯಾನರ್ಜಿ ಅವರ ಆಪ್ತರಾದ ಅನುಬ್ರಾತಾ ಮಂಡಲ್ ಅವರನ್ನು ಆಗಸ್ಟ್ 20ರವರೆಗೂ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿದೆ.

ಎಸ್ ಎಸ್ ಸಿ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಆತನ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನು ಇಂದಿನವರೆಗೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವ ಇಡಿ, ಸುಮಾರು 50 ಕೋಟಿ ನಗದು, ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿರುವುದಾಗಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com