ಬರೋಬ್ಬರಿ 3.5 ಕಿ.ಮೀ ಉದ್ದವಿದೆ ಸೂಪರ್ ವಾಸುಕಿ ರೈಲು! ಈ ರೈಲಿನಲ್ಲಿರುವ ವೈಶಿಷ್ಟ್ಯಗಳೇನು?

ಬರೋಬ್ಬರಿ 3.5 ಕಿ.ಮೀ ಉದ್ದವಿರುವ ಸೂಪರ್ ವಾಸುಕಿ ರೈಲಿಗೆ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಚಾಲನೆ ಸಿಕ್ಕಿದೆ.
ಸೂಪರ್ ವಾಸುಕಿ ರೈಲು
ಸೂಪರ್ ವಾಸುಕಿ ರೈಲು

ನವದೆಹಲಿ: ಬರೋಬ್ಬರಿ 3.5 ಕಿ.ಮೀ ಉದ್ದವಿರುವ ಸೂಪರ್ ವಾಸುಕಿ ರೈಲಿಗೆ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಚಾಲನೆ ಸಿಕ್ಕಿದೆ.

ಭಾರತೀಯ ರೈಲ್ವೆ ಇಲಾಖೆ ‘ಭಾರತದ ಅತಿ ಉದ್ದದ ಮತ್ತು ಭಾರವಾದ ಸರಕು ಸಾಗಣೆ ರೈಲು ‘ಸೂಪರ್ ವಾಸುಕಿ’ಯನ್ನು ಸ್ವಾತಂತ್ರ್ಯ ದಿನದಂದು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

ಇದು 3.5 ಕಿಮೀ ಉದ್ದದ ಸರಕು ರೈಲು ಇದಾಗಿದ್ದು, 295 ಲೋಡ್ ವ್ಯಾಗನ್‌ಗಳು 27,000 ಟನ್ ಕಲ್ಲಿದ್ದಲನ್ನು ಆಗಸ್ಟ್ 15 ರಂದು ಛತ್ತೀಸ್‌ಗಢದ ಕೊರ್ಬಾ ಮತ್ತು ನಾಗಪುರದ ರಾಜನಂದಗಾವೊಗೆ ಸಾಗಿಸಿತು. 5 ರೇಕ್‌ಗಳ ಗೂಡ್ಸ್ ರೈಲುಗಳನ್ನು ಒಂದು ಘಟಕವಾಗಿ ಸಂಯೋಜಿಸಿ ರೈಲನ್ನು ರಚಿಸಲಾಗಿದ್ದು, ಇದು 5 ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ.

ವಿಶೇಷವಾಗಿ ವಿದ್ಯುತ್ ಕೇಂದ್ರಗಳ ಇಂಧನ ಕೊರತೆಯನ್ನು ನೀಗಿಸಲು ಗರಿಷ್ಠ ಬೇಡಿಕೆಯ ಸಮಯದಲ್ಲಿ ಕಲ್ಲಿದ್ದಲನ್ನು ಸಾಗಿಸಲು ಈ ರೈಲು ಬಳಕೆಯಾಗಲಿದೆ. ಈ ರೈಲು ಕೋಠಾರಿ ರೋಡ್ ರೈಲು ನಿಲ್ದಾಣವನ್ನು ಹಾಯ್ದು ಹೋಗುವಾಗಿನ ವಿಡಿಯೊ ವೈರಲ್ ಆಗಿದೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ವಿಡಿಯೊ ಹಂಚಿಕೊಂಡಿದ್ದಾರೆ.

ಈ ರೈಲಿನಲ್ಲಿ ಸರಕು ಭರ್ತಿಯಾದ 295 ವ್ಯಾಗನ್‌ಗಳು ಇದ್ದು, ಒಟ್ಟಾರೆ 27,000 ಟನ್‌ ಕಲ್ಲಿದ್ದಲು ಸಾಗಣೆ ಮಾಡಿತು. ಈ ರೈಲು ಐದು ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. ರೈಲು ಛತ್ತೀಸಗಡದಲ್ಲಿ ಭಿಲಾಯಿಯಿಂದ ಕೊರ್ಬಾಗೆ ಸಂಚರಿಸಿದ್ದು, ನಿಲ್ದಾಣದಿಂದ ನಿರ್ಗಮಿಸಲು ಬರೋಬ್ಬರಿ 4 ನಿಮಿಷ ತೆಗೆದುಕೊಂಡಿತು.

ಬಿಲಾಸ್‌ಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಗ್ನೇಯ ಕೇಂದ್ರ ರೈಲ್ವೆಯು ಇದರ ನಿರ್ವಹಣೆ ಮಾಡಲಿದೆ. ರೈಲ್ವೆ ಇಲಾಖೆಯು ಹೀಗೇ ಒಂದೇ ರೈಲಿನಲ್ಲಿ ಅತ್ಯಧಿಕ ಪ್ರಮಾಣ, ತೂಕದ ಇಂಧನ ಸಾಗಣೆ ಮಾಡಿರುವುದು ದಾಖಲೆಯಾಗಿದೆ ಎಂದು ರೈಲ್ವೆ ಇಲಾಖೆಯ ಹೇಳಿಕೆಯಲ್ಲಿ ತಿಳಿಸಿದೆ.

ರೈಲ್ವೆ ಇಲಾಖೆಯು ಕಳೆದ ವರ್ಷವೂ ವಾಸುಕಿ ಮತ್ತು ತ್ರಿಶೂಲ್ ಹೆಸರಿನಲ್ಲಿ ಉದ್ದನೆಯ ರೈಲು ಸಂಚಾರ ನಡೆಸಿತ್ತು. ಇವುಗಳ ಒಟ್ಟು ಉದ್ದ 2.8 ಕಿ.ಮೀ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com