ಬಿಲ್ಕಿಸ್ ಬಾನು ಅತ್ಯಾಚಾರಿಗಳು ಉತ್ತಮ ಸಂಸ್ಕಾರ ಹೊಂದಿದ ಬ್ರಾಹ್ಮಣರು: ಬಿಜೆಪಿ ಶಾಸಕ
ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಕೆಲವು ಅಪರಾಧಿಗಳು ಉತ್ತಮ ಸಂಸ್ಕಾರ ಹೊಂದಿದ ಬ್ರಾಹ್ಮಣರಾಗಿದ್ದಾರೆ, ಅವರನ್ನು ಅವರ ಹಿಂದಿನ ಚಟುವಟಿಕೆಗಳ ಕಾರಣದಿಂದಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬಿಜೆಪಿ ಶಾಸಕನೋರ್ವ ಹೇಳಿದ್ದಾರೆ.
Published: 19th August 2022 02:31 AM | Last Updated: 19th August 2022 02:29 PM | A+A A-

ಬಿಜೆಪಿ ಸಾಂದರ್ಭಿಕ ಚಿತ್ರ
ನವದೆಹಲಿ: 2022 ರ ಗುಜರಾತ್ ದಂಗೆಯ ವೇಳೆ ನಡೆದಿದ್ದ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಕೆಲವು ಅಪರಾಧಿಗಳು ಉತ್ತಮ ಸಂಸ್ಕಾರ ಹೊಂದಿದ ಬ್ರಾಹ್ಮಣರಾಗಿದ್ದಾರೆ, ಅವರನ್ನು ಅವರ ಹಿಂದಿನ ಚಟುವಟಿಕೆಗಳ ಕಾರಣದಿಂದಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬಿಜೆಪಿ ಶಾಸಕನೋರ್ವ ಹೇಳಿದ್ದಾರೆ.
ಅಪರಾಧಿಗಳನ್ನು ಬಿಡುಗಡೆ ಮಾಡುವುದಕ್ಕೆ ಶಿಫಾರಸು ಮಾಡಿದ್ದ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಭಾಗವಾಗಿದ್ದ ಶಾಸಕ ಈ ಹೇಳಿಕೆ ನೀಡಿದ್ದಾರೆ.
ಗೋಧ್ರಾದ ಬಿಜೆಪಿ ಶಾಸಕ ಸಿಕೆ ರೌಲ್ ಜೀ, 15 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾದವರು ಅಪರಾಧಗಳಲ್ಲಿ ಭಾಗಿಯಾಗಿದ್ದರೇ? ಎಂಬ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಆ.15 ರಂದು ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು.
ನಾವು ಸುಪ್ರೀಂ ಕೋರ್ಟ್ ನ ಆದೇಶದ ಆಧಾರದಲ್ಲಿ ನಿರ್ಧಾರ ಕೈಗೊಂಡಿದ್ದೇವೆ, ಅಪರಾಧಿಗಳ ನಡೆತೆಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗಿದೆ.
ನಾವು ಜೈಲರ್ ಅವರನ್ನು ಕೇಳಿದ್ದೆವು ಹಾಗೂ ಜೈಲಿನಲ್ಲಿ ಅಪರಾಧಿಗಳ ನಡತೆ ಉತ್ತಮವಾಗಿದ್ದು, ಅಪರಾಧಿಗಳ ಪೈಕಿ ಕೆಲವರು ಬ್ರಾಹ್ಮಣರಾಗಿದ್ದು ಅವರಿಗೆ ಉತ್ತಮ ಸಂಸ್ಕಾರ ವಿದೆ ಎಂದು ಶಾಸಕ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಗುಜರಾತ್ ನ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.