ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ದಾಳಿ, ಕಲ್ಲು ತೂರಾಟ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಭಾನುವಾರ ಕಲ್ಲು ತೂರಾಟ ನಡೆದಿದೆ. ಪಾಟ್ನಾದಲ್ಲಿ ನಡೆದ ಈ ಘಟನೆ ವೇಳೆ ಬೆಂಗಾವಲು ವಾಹನ ಪಡೆಯಲ್ಲಿ ನಿತೀಶ್ ಕುಮಾರ್ ಇರಲಿಲ್ಲ ಎಂದು ತಿಳಿದುಬಂದಿದೆ.
Published: 21st August 2022 09:22 PM | Last Updated: 21st August 2022 09:26 PM | A+A A-

ಬೆಂಗಾವಲು ವಾಹನದ ಗಾಜುಗಳಿಗೆ ಹಾನಿ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಭಾನುವಾರ ಕಲ್ಲು ತೂರಾಟ ನಡೆದಿದೆ. ಪಾಟ್ನಾದಲ್ಲಿ ನಡೆದ ಈ ಘಟನೆ ವೇಳೆ ಬೆಂಗಾವಲು ವಾಹನ ಪಡೆಯಲ್ಲಿ ನಿತೀಶ್ ಕುಮಾರ್ ಇರಲಿಲ್ಲ ಎಂದು ತಿಳಿದುಬಂದಿದೆ.
ದಾಳಿಯಲ್ಲಿ ಬೆಂಗಾವಲು ವಾಹನದ ಕಾರಿನ ಗಾಜುಗಳಿಗೆ ಹಾನಿಯಾಗಿದೆ. ಇತ್ತೀಚಿಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ
ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ಪತನವಾಗಿ 'ಮಹಾಘಟಬಂಧನ್' -02 ಸರ್ಕಾರ ರಚನೆಯಾಗಿತ್ತು.
Patna | Stones pelted at the convoy of Bihar CM Nitish Kumar; CM was not present in the convoy at the time of the incident. pic.twitter.com/5kNnn7IDlv
— ANI (@ANI) August 21, 2022
ಬಿಜೆಪಿ ಜೊತೆಗಿನ ಧೀರ್ಘ ಸಂಬಂಧವನ್ನು ಕಡಿದುಕೊಂಡು ಆರ್ ಜೆಡಿ ನೇತೃತ್ವದ ವಿಪಕ್ಷಗಳ ಬೆಂಬಲದೊಂದಿಗೆ ನಿತೀಶ್ ಕುಮಾರ್ ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.