ಸಿಜೆಐ ಎನ್ವಿ ರಮಣ ಇಂದು ನಿವೃತ್ತಿ: ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಗಳು ನೇರಪ್ರಸಾರ
ದೇಶದ ಪರಮೋಚ್ಛ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ ಶುಕ್ರವಾರದ ಕಾರ್ಯಕಲಾಪಗಳು ನೇರಪ್ರಸಾರವಾಗುತ್ತಿದೆ.
Published: 26th August 2022 11:21 AM | Last Updated: 26th August 2022 01:56 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ದೇಶದ ಪರಮೋಚ್ಛ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ ಶುಕ್ರವಾರದ ಕಾರ್ಯಕಲಾಪಗಳು ನೇರಪ್ರಸಾರವಾಗುತ್ತಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠದ ವಿಚಾರಣೆಯನ್ನು ವೆಬ್‌ಕಾಸ್ಟ್ ಪೋರ್ಟಲ್ ಮೂಲಕ ನೇರ ಪ್ರಸಾರ(Live straming) ಮಾಡಲಾಗುತ್ತದೆ. ಹಾಲಿ ಮುಖ್ಯ ನ್ಯಾಯಾಧೀಶ ರಮಣ ಅವರ ಅಧಿಕಾರಾವಧಿ ಇಂದು ಮುಕ್ತಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ ಕಲಾಪಗಳು ನೇರಪ್ರಸಾರವಾಗುತ್ತಿದೆ.
ಇಂದು ಸಿಜೆಐ ಎನ್ ವಿ ರಮಣ ನಿವೃತ್ತಿ: ಭಾರತದ ಸುಪ್ರೀಂ ಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಕಚೇರಿಯನ್ನು ತ್ಯಜಿಸುವ ದಿನದಂದು, ಔಪಚಾರಿಕ ಪೀಠದ ಕಲಾಪ ಪ್ರಕ್ರಿಯೆಗಳು ಇಂದು ಬೆಳಗ್ಗೆ 10:30 ರಿಂದ ನೇರ ಪ್ರಸಾರವಾಗುತ್ತವೆ. ಎನ್‌ಐಸಿ ವೆಬ್‌ಕಾಸ್ಟ್ ಪೋರ್ಟಲ್ ಮೂಲಕ ನೇರಪ್ರಸಾರವಾಗುತ್ತದೆ ಎಂದು ನೊಟೀಸ್ ನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸಂವಿಧಾನದ ರಕ್ಷಕ: ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ
2018 ರಲ್ಲಿ ಉನ್ನತ ನ್ಯಾಯಾಲಯವು ಸಾಂವಿಧಾನಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಕರಣಗಳ ನ್ಯಾಯಾಲಯದ ವಿಚಾರಣೆಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿತು, ಈ ಮುಕ್ತತೆಯು "ಸೂರ್ಯನ ಬೆಳಕಿನಂತೆ" ಪಾರದರ್ಶಕತೆಯನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿತ್ತು.
ಪ್ರಾಯೋಗಿಕ ಯೋಜನೆಯಾಗಿ, ಸಾಂವಿಧಾನಿಕ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಮತ್ತು ಸಾಂವಿಧಾನಿಕ ಪೀಠದ ಮುಂದೆ ವಾದಿಸುತ್ತಿರುವ ನಿರ್ದಿಷ್ಟ ವರ್ಗದ ಪ್ರಕರಣಗಳನ್ನು ಮಾತ್ರ ನೇರ ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದಲ್ಲಿ ಪ್ರಮುಖ ಪ್ರಕರಣಗಳ ನೇರ ಪ್ರಸಾರವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಬಹುದು ಎಂದು ಸಲಹೆ ನೀಡಿದ್ದರು. ಪ್ರಾಯೋಗಿಕ ಯೋಜನೆಯ ಯಶಸ್ಸಿನ ಆಧಾರದ ಮೇಲೆ ಇತರ ನ್ಯಾಯಾಲಯಗಳಲ್ಲಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬಹುದು ಎಂದು ಅಟಾರ್ನಿ ಜನರಲ್ ಹೇಳಿದ್ದರು.