'ಹಾಳು ಬಾವಿಗೆ ಬೀಳುತ್ತೇನೆಯೇ ಹೊರತು ಕಾಂಗ್ರೆಸ್ ಸೇರುವುದಿಲ್ಲ': ನಿತಿನ್ ಗಡ್ಕರಿ

ಕಾಂಗ್ರೆಸ್ ಪಕ್ಷದ ಸಿದ್ಧಾಂತ ಸರಿಯಿಲ್ಲ.. ಹೀಗಾಗಿ ನಾನು ಹಾಳು ಬಾವಿಗೆ ಬೀಳುತ್ತೇನೆಯೇ ಹೊರತು ಆ ಪಕ್ಷವನ್ನು ಸೇರುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನವದೆಹಲಿ: ಕಾಂಗ್ರೆಸ್ ಪಕ್ಷದ ಸಿದ್ಧಾಂತ ಸರಿಯಿಲ್ಲ.. ಹೀಗಾಗಿ ನಾನು ಹಾಳು ಬಾವಿಗೆ ಬೀಳುತ್ತೇನೆಯೇ ಹೊರತು ಆ ಪಕ್ಷವನ್ನು ಸೇರುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಾಗ್ಪುರದಲ್ಲಿ ಶನಿವಾರ ನಡೆದ ವಾಣಿಜ್ಯೋದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾ, ಈ ಹಿಂದೆ ನನ್ನ ಸ್ನೇಹಿತನೋರ್ವ ಕಾಂಗ್ರೆಸ್ ಸೇರಲು ಸಲಹೆ ನೀಡಿದ್ದ.. ಅದಕ್ಕೆ ನಾನು ಹಾಳು ಬಾವಿಗೆ ಬೀಳುತ್ತೇನೆಯೇ ಹೊರತು ಆ ಪಕ್ಷವನ್ನು ಮಾತ್ರ ಸೇರುವುದಿಲ್ಲ ಎಂದು ಉತ್ತರಿಸಿದ್ದೆ ಎಂದು ಹೇಳಿದ್ದಾರೆ.

"ನನ್ನ ಸ್ನೇಹಿತ ಒಮ್ಮೆ ಹೇಳಿದ್ದ ನೀನು ಒಳ್ಳೆಯ ವ್ಯಕ್ತಿ, ನಿನಗೆ ಒಳ್ಳೆಯ ರಾಜಕೀಯ ಭವಿಷ್ಯವಿದೆ, ಆದರೆ ನೀನು ತಪ್ಪು ಪಕ್ಷದಲ್ಲಿದ್ದೀಯ, ನೀನು ಕಾಂಗ್ರೆಸ್ ಸೇರಬೇಕು ಎಂದು ಹೇಳಿದ್ದ.. ಇದಕ್ಕೆ ನಾನು, ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಕ್ಕಿಂತ ಹಾಳು ಬಾವಿಗೆ ಹಾರುತ್ತೇನೆ.. ಏಕೆಂದರೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ ನನಗೆ ಇಷ್ಟವಿಲ್ಲ, ನಿಮ್ಮ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಹೇಳಿದೆ ಎಂದು ಗಡ್ಕರಿ ಹೇಳಿದ್ದಾರೆ. 

'ಮಾನವ ಸಂಬಂಧವೇ ವ್ಯಾಪಾರ, ಸಾಮಾಜಿಕ ಕೆಲಸ ಮತ್ತು ರಾಜಕೀಯದ ಬಹುದೊಡ್ಡ ಶಕ್ತಿ. ಹಾಗಾಗಿ ಅದನ್ನು ಬಳಸಿ ಬಿಸಾಡಬಾರದು. ಒಳ್ಳೆಯ ದಿನಗಳು ಇರಲಿ, ಕೆಟ್ಟ ದಿನಗಳು ಇರಲಿ, ಒಮ್ಮೆ ಕೈ ಹಿಡಿದರೆ ಅದನ್ನು ಸದಾ ಹಿಡಿದುಕೊಳ್ಳಿ" ಎಂದು ಅವರು ಹೇಳಿದರು. 

ಇದೇ ವೇಳೆ ಹಿಂದಿನ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಜೀವನ ಚರಿತ್ರೆಯನ್ನು ಪ್ರಸ್ತುತಪಡಿಸಿದ ಹಳೆಯ ಸ್ನೇಹಿತನನ್ನು ಸಹ ಗಡ್ಕರಿ ನೆನಪಿಸಿಕೊಂಡರು. ಆ ಪುಸ್ತಕದಲ್ಲಿ ಬರೆದ ಒಂದು ಸಾಲು ನನಗೆ ಪ್ರಯೋಜನವಾಗಿದೆ ಎಂದು ಹೇಳಿದ ಗಡ್ಕರಿ, "ಯುದ್ಧದಲ್ಲಿ ಸೋತಾಗ ಮನುಷ್ಯ ಕೊನೆಯಾಗುವುದಿಲ್ಲ, ಆದರೆ ಅವನು ಯುದ್ದ ತ್ಯಜಿಸಿದಾಗ ಅವನು ಸೋಲಿಸಲ್ಪಟ್ಟನು. ನನ್ನ ಸ್ನೇಹಿತರೊಬ್ಬರು ಐಐಟಿಗೆ ಹೋಗಿದ್ದರು, ನಾವು ಚುನಾವಣೆಯಲ್ಲಿ ಸೋತಿದ್ದ ಸಂದರ್ಭದಲ್ಲಿ ಅವರು ನನಗೆ ಪುಸ್ತಕವನ್ನು ನೀಡಿದರು. ಯುದ್ಧದಲ್ಲಿ ಸೋತಾಗ ಮುಗಿಯುವುದಿಲ್ಲ, ಬಿಟ್ಟರೆ ಸೋಲುತ್ತಾನೆ. ಆದ್ದರಿಂದ ಹೋರಾಡಬೇಕು. ಸಕಾರಾತ್ಮಕತೆ ಇರಬೇಕು. ಅಹಂಕಾರ ಮತ್ತು ಆತ್ಮವಿಶ್ವಾಸದ ನಡುವೆ ವ್ಯತ್ಯಾಸವಿದೆ. ಯಾರೂ ಪರಿಪೂರ್ಣರಲ್ಲ. ಜನರಿಂದ ನಾವು ಕಲಿಯುವುದು ಬಹಳಷ್ಟಿದೆ. ಗುಣಮಟ್ಟದ ಮೇಲೆ ಯಾರಿಗೂ ಪೇಟೆಂಟ್ ಇಲ್ಲ ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com