ಸರ್ವಿಕಲ್ ಕ್ಯಾನ್ಸರ್ ಗೆ ದೇಶದ ಮೊದಲ ಲಸಿಕೆ ಸೆಪ್ಟೆಂಬರ್ 1 ರಂದು ಬಿಡುಗಡೆ

ಸರ್ವಿಕಲ್ ಕ್ಯಾನ್ಸರ್ ಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ) ಅಭಿವೃದ್ಧಿಪಡಿಸಿರುವ ದೇಶದ ಮೊದಲ ಲಸಿಕೆ, ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸರ್ವಿಕಲ್ ಕ್ಯಾನ್ಸರ್ ಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ) ಅಭಿವೃದ್ಧಿಪಡಿಸಿರುವ ದೇಶದ ಮೊದಲ ಲಸಿಕೆ, ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ (qHPV)ಅನ್ನು  ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಎಎನ್ಐಗೆ ತಿಳಿಸಿವೆ.

ಬಹು ನಿರೀಕ್ಷಿತ ಈ ಲಸಿಕೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ಬಿಡುಗಡೆ ಮಾಡಲಿದ್ದಾರೆ.

ಕೋವಿಡ್ ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷರಾದ ಡಾ ಎನ್ ಕೆ ಅರೋರಾ ಅವರ ಪ್ರಕಾರ, ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(ಎನ್‌ಟಿಎಜಿಐ) ಭಾರತದಲ್ಲಿ ತಯಾರಿಸಿದ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

"ಇದು ತುಂಬಾ ಸಂತೋಷದ ವಿಚಾರ ಮತ್ತು ನಮ್ಮ ಹೆಣ್ಣುಮಕ್ಕಳು, ಮೊಮ್ಮಕ್ಕಳು ಈಗ ಈ ಬಹುನಿರೀಕ್ಷಿತ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಾನು ಹೇಳಲೇಬೇಕು" ಎಂದಿದ್ದಾರೆ.

ಸರ್ವಿಕಲ್ ಕ್ಯಾನ್ಸರ್ ಎಂದರೇನು?
ಇದೊಂದು ಕ್ಯಾನ್ಸರ್ ಪ್ರಕಾರವಾಗಿದ್ದು ಮಹಿಳೆಯರಲ್ಲಿ ಕಂಡುಬರುತ್ತದೆ. ಮಹಿಳೆಯರ ಗರ್ಭಕೋಶದ ಕೆಳಭಾಗದಲ್ಲಿರುವ ಗರ್ಭನಾಳ ಅಥವಾ ಗರ್ಭಕಂಠದಲ್ಲಿ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಗರ್ಭಕಂಠವು ಗರ್ಭಕೋಶ ಹಾಗೂ ಯೋನಿಯ ಮಧ್ಯದ ಸಂಪರ್ಕ ಸೇತುವಾಗಿದ್ದು ಈ ಭಾಗದಲ್ಲಿ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಗರ್ಭಕಂಠವು ಎರಡು ಭಾಗಗಳಿಂದ ಕೂಡಿರುತ್ತದೆ. ಅದರ ಒಳಭಾಗವನ್ನು ಎಂಡೋಸರ್ವಿಕ್ಸ್ ಎಂದು ಕರೆಯುತ್ತಾರೆ. ಇದರಲ್ಲಿ ಒಂದು ರೀತಿಯ ಜೀವಕೋಶಗಳಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com