ಮೋದಿಯನ್ನು ಯಾರು ಹೆಚ್ಚು ನಿಂದಿಸುತ್ತಾರೆಂಬುದಕ್ಕೆ ಕಾಂಗ್ರೆಸ್ ನಲ್ಲಿ ಪೈಪೋಟಿಯಿದೆ: ಖರ್ಗೆ 'ರಾವಣ' ಹೇಳಿಕೆಗೆ ಪ್ರಧಾನಿ ಪ್ರತಿಕ್ರಿಯೆ

ಮೋದಿಗೆ ಯಾರು ಹೆಚ್ಚು ಕೆಟ್ಟ ಮಾತುಗಳನ್ನಾಡುತ್ತಾರೆ ಎಂಬ ಪೈಪೋಟಿ ಕಾಂಗ್ರೆಸ್‌ನಲ್ಲಿದೆ...ಅವರಿಗೆ ತಕ್ಕ ಪಾಠ ಕಲಿಸಬೇಕು ಇದಕ್ಕೆ 5ನೇ ತಾರೀಖು (ಗುಜರಾತ್ ಚುನಾವಣೆಯ ಎರಡನೇ ಹಂತ) ಕಮಲಕ್ಕೆ ಮತ ಹಾಕುವುದೇ ದಾರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಕಲೋಲ್‌: ಮೋದಿಗೆ ಯಾರು ಹೆಚ್ಚು ಕೆಟ್ಟ ಮಾತುಗಳನ್ನಾಡುತ್ತಾರೆ ಎಂಬ ಪೈಪೋಟಿ ಕಾಂಗ್ರೆಸ್‌ನಲ್ಲಿದೆ...ಅವರಿಗೆ ತಕ್ಕ ಪಾಠ ಕಲಿಸಬೇಕು ಇದಕ್ಕೆ 5ನೇ ತಾರೀಖು (ಗುಜರಾತ್ ಚುನಾವಣೆಯ ಎರಡನೇ ಹಂತ) ಕಮಲಕ್ಕೆ ಮತ ಹಾಕುವುದೇ ದಾರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.

ಗುಜರಾತ್‌ನ ಕಲೋಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿಯವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ದೆಯವರ ರಾವಣ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.

ಮೋದಿಯನ್ನು ಯಾರು ಹೆಚ್ಚು ನಿಂದಿಸಬಹುದು ಎಂಬುದಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ನಾಯಕರೊಬ್ಬರು ಮೋದಿ ನಾಯಿ ರೀತಿ ಸಾಯುತ್ತಾರೆಂದು ಹೇಳಿದ್ದರು. ಇನ್ನೊಬ್ಬರು ಮೋದಿ ಹಿಟ್ಲರ್ ರೀತಿ ಸಾಯುತ್ತಾರೆ ಎಂದು ಹೇಳಿದ್ದರು. ಮತ್ತೊಬ್ಬರು ಇನ್ನೊಬ್ಬರು ನನಗೆ ಅವಕಾಶ ಸಿಕ್ಕರೆ, ಮೋದಿಯನ್ನು ನಾನೇ ಕೊಲ್ಲುತ್ತೇನೆ ಎಂದು ಹೇಳಿದ್ದರು. ಇನ್ನೊಬ್ಬರು ರಾಕ್ಷಸ ಎಂದಿದ್ದರೆ, ಮತ್ತೊಬ್ಬರು ಜಿರಳೆ ಎಂದರು. ಇದೀಗ ಮತ್ತೊಬ್ಬರು ರಾವಣ ಎಂದು ಹೇಳಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ನಾಯಕ ಮಧುಸೂದನ್ ಮಿಸ್ತ್ರಿ ಅವರು ಮೋದಿಯವರ ಹೆಸರಿನ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡುವ ಬಗ್ಗೆ ಮಾತನಾಡುವಾಗ "ಮೋದಿಜಿಗೆ ಅವರ ತಾಕತ್ ತೋರಿಸಲು ಬಯಸುತ್ತೇನೆಂದು ಹೇಳಿದ್ದರು.

ಗುಜರಾತ್ ನನಗೆ ನೀಡಿದ ಶಕ್ತಿ ಕಾಂಗ್ರೆಸ್‌ಗೆ ತೊಂದರೆಯಾಗಿದೆ. ಕಾಂಗ್ರೆಸ್ ನಾಯಕರೊಬ್ಬರು ಇಲ್ಲಿಗೆ ಬಂದು ಈ ಚುನಾವಣೆಯಲ್ಲಿ ಮೋದಿಯವರಿಗೆ ನಮ್ಮ ತಾಕತ್ ತೋರಿಸುತ್ತೇವೆ ಎಂದು ಹೇಳಿದರು. ಕಾಂಗ್ರೆಸ್‌ಗೆ ಇನ್ನೂ ಹೆಚ್ಚು ಏನಾದರೂ ಹೇಳಬೇಕು ಎಂದು ಅನ್ನಿಸಿದೆ. ಅದಕ್ಕೆ ಕಾಂಗ್ರೆಸ್ ಖರ್ಗೆ ಅವರನ್ನು ಇಲ್ಲಿಗೆ ಕಳುಹಿಸಿದ್ದಾರೆ.

ನಾನು ಖರ್ಗೆ ಅವರನ್ನು ಗೌರವಿಸುತ್ತೇನೆ. ಆದರೆ, ಅವರು ಕೇಳಿದಕ್ಕೆ ನಾನು ಪ್ರತಿಕ್ರಿಯೆ ನೀಡಲೇಬೇಕು. ಗುಜರಾತ್ ರಾಮಭಕ್ತರ ರಾಜ್ಯ ಎಂಬುದು ಕಾಂಗ್ರೆಸ್ಸಿಗೆ ಗೊತ್ತಿಲ್ಲ. ಇಲ್ಲಿ ಮೋದಿ 100 ತಲೆಗಳ ರಾವಣ ಎಂದು ಹೇಳಿದ್ದಾರೆ ಎಂದು ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com