AIIMS ಆಯ್ತು ಈಗ ICMR ಟಾರ್ಗೆಟ್; ಒಂದೇ ದಿನದಲ್ಲಿ 6 ಸಾವಿರ ಬಾರಿ ಸೈಬರ್ ದಾಳಿಗೆ ಯತ್ನಿಸಿದ ಹ್ಯಾಕರ್ಸ್, ಎಲ್ಲವೂ ವಿಫಲ!

ಭಾರತೀಯ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ಮೇಲೆ ಹ್ಯಾಕರ್ ಗಳ ಮುಂದುವರೆದಿದ್ದು, ಏಮ್ಸ್ ಬೆನ್ನಲ್ಲೇ ಇದೀಗ ಹ್ಯಾಕರ್ ಗಳ ತಂಡ ICMR ವೆಬ್ ಸೈಟ್ ಅನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ಮೇಲೆ ಹ್ಯಾಕರ್ ಗಳ ಮುಂದುವರೆದಿದ್ದು, ಏಮ್ಸ್ ಬೆನ್ನಲ್ಲೇ ಇದೀಗ ಹ್ಯಾಕರ್ ಗಳ ತಂಡ ICMR ವೆಬ್ ಸೈಟ್ ಅನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿದ್ದಾರೆ.

ದೇಶದ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ  ICMRನ ವೆಬ್ ಸೈಟ್ ಮೇಲೆ ಹ್ಯಾಕರ್ ಗಳು ಕೇವಲ ಒಂದೇ ದಿನದಲ್ಲಿ 6 ಸಾವಿರ ಬಾರಿ ದಾಳಿ ಮಾಡಿದ್ದಾರೆ. ಆದರೆ ಹ್ಯಾಕರ್ ಗಳ ದಾಳಿ ಪ್ರಯತ್ನವನ್ನು ಸಂಸ್ಥೆಯ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ನವೆಂಬರ್ 30 ರಂದು 24 ಗಂಟೆಗಳ ಅವಧಿಯಲ್ಲಿ ಹಾಂಗ್ ಕಾಂಗ್‌ನ ಹ್ಯಾಕರ್‌ಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವೆಬ್‌ಸೈಟ್‌ನ ಮೇಲೆ ಸುಮಾರು 6000 ಬಾರಿ ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ದೆಹಲಿಯಲ್ಲಿ AIIMS ಆನ್ಲೈನ್ ಸೇವೆಗಳ ತಾತ್ಕಾಲಿಕ ತಡೆಗೆ ಕಾರಣವಾದ ransomware ದಾಳಿಯ ಬೆನ್ನಲ್ಲೇ ಈ ದಾಳಿಗಳು ನಡೆದಿವೆ ಎಂದು ಅವರು ಮಾಹಿತಿ ತಿಳಿಸಿದ್ದಾರೆ.

"ICMR ವೆಬ್‌ಸೈಟ್‌ನ ವಿಷಯಗಳು ಸುರಕ್ಷಿತವಾಗಿವೆ. ಸೈಟ್ ಅನ್ನು NIC ಡೇಟಾ ಸೆಂಟರ್‌ನಲ್ಲಿ ಹೋಸ್ಟ್ ಮಾಡಲಾಗಿದೆ, ಆದ್ದರಿಂದ ಅವರು ನಿಯಮಿತವಾಗಿ ನವೀಕರಿಸುವ NIC ನಿಂದ ಫೈರ್‌ವಾಲ್ ರಕ್ಷಣಾ ವ್ಯವಸ್ಥೆ ಹ್ಯಾಕರ್ ಗಳ ದಾಳಿ ತಪ್ಪಿಸಿದೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹ್ಯಾಕರ್ ಗಳ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com