ದೆಹಲಿ ಅಬಕಾರಿ ಹಗರಣ: ಕೆಸಿಆರ್ ಪುತ್ರಿ ಕವಿತಾಗೆ ಹೊಸ ನೋಟಿಸ್ ನೀಡಿದ ಸಿಬಿಐ

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಟಿಆರ್ ಎಸ್ ಎಂಎಲ್‌ಸಿ ಕೆ ಕವಿತಾ ಅವರಿಗೆ ಸಿಬಿಐ ಹೊಸ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು...
ತೆಲಂಗಾಣ ಸಿಎಂ ಪುತ್ರಿ ಕವಿತಾ(ಸಂಗ್ರಹ ಚಿತ್ರ)
ತೆಲಂಗಾಣ ಸಿಎಂ ಪುತ್ರಿ ಕವಿತಾ(ಸಂಗ್ರಹ ಚಿತ್ರ)

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಟಿಆರ್ ಎಸ್ ಎಂಎಲ್‌ಸಿ ಕೆ ಕವಿತಾ ಅವರಿಗೆ ಸಿಬಿಐ ಹೊಸ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿದಂತೆ ಡಿಸೆಂಬರ್ 11 ರಂದು ಹೈದರಾಬಾದ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಕವಿತಾ ಅವರಿಗೆ ಸಿಬಿಐ ಹೊಸ ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ಡಿಸೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಆದರೆ ಟಿಆರ್ ಎಸ್ ನಾಯಕಿ ಡಿಸೆಂಬರ್ 11 ರಿಂದ 15ರ ನಡುವೆ ಯಾವುದೇ ದಿನಾಂಕಕ್ಕೆ ತಮ್ಮ ವಿಚಾರಣೆಯನ್ನು ಮುಂದೂಡುವಂತೆ ಸಿಬಿಐಗೆ ಮನವಿ ಮಾಡಿದ್ದರು. ಅದನ್ನು ತನಿಖಾ ಸಂಸ್ಥೆ ಸಮ್ಮತಿಸಿದೆ ಎಂದು ತಿಳಿದುಬಂದಿದೆ.

ಇನ್ನು ಡಿಸೆಂಬರ್ 2 ರಂದು ನೀಡಲಾದ ಮೊದಲ ನೋಟಿಸ್‌ ಪ್ರತಿಕ್ರಿಯಿಸಿದ್ದ ಕವಿತಾ, ಎಫ್‌ಐಆರ್ ಪ್ರತಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದೂರಿನ ವಿಷಯಗಳನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ಯಾವುದೇ ರೀತಿಯಲ್ಲೂ ಮತ್ತು ಎಲ್ಲಿಯೂ ತನ್ನ ಹೆಸರು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com