ಕೊಟ್ಟ ಹಣ ಹಿಂತಿರುಗಿಸಲು ಮಹಿಳೆ ವಿಫಲ; ಮಾರುಕಟ್ಟೆಯಲ್ಲೇ ಕೈ, ಎದೆ, ಕಿವಿಗಳನ್ನು ಕತ್ತರಿಸಿ ಕೊಲೆ

ಬಿಹಾರದ ಭಾಗಲ್ಪುರದಲ್ಲಿ ಇಬ್ಬರು ವ್ಯಕ್ತಿಗಳು ಜನನಿಬಿಡ ಮಾರುಕಟ್ಟೆಯಲ್ಲಿ ಹಗಲು ಹೊತ್ತಿನಲ್ಲೇ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಮಹಿಳೆಯೊಬ್ಬರ ಕೈ, ಎದೆಯ ಭಾಗ ಮತ್ತು ಕಿವಿಗಳನ್ನು ಕತ್ತರಿಸಿದ ನಂತರ ಅವರು ಸಾವಿಗೀಡಾಗಿದ್ದಾರೆ.
ಕೊಟ್ಟ ಹಣ ಹಿಂತಿರುಗಿಸಲು ಮಹಿಳೆ ವಿಫಲ; ಮಾರುಕಟ್ಟೆಯಲ್ಲೇ ಕೈ, ಎದೆ, ಕಿವಿಗಳನ್ನು ಕತ್ತರಿಸಿ ಕೊಂದ ಸಾಲಕೊಟ್ಟವರು
ಕೊಟ್ಟ ಹಣ ಹಿಂತಿರುಗಿಸಲು ಮಹಿಳೆ ವಿಫಲ; ಮಾರುಕಟ್ಟೆಯಲ್ಲೇ ಕೈ, ಎದೆ, ಕಿವಿಗಳನ್ನು ಕತ್ತರಿಸಿ ಕೊಂದ ಸಾಲಕೊಟ್ಟವರು
Updated on

ಪಾಟ್ನಾ: ಬಿಹಾರದ ಭಾಗಲ್ಪುರದಲ್ಲಿ ಇಬ್ಬರು ವ್ಯಕ್ತಿಗಳು ಜನನಿಬಿಡ ಮಾರುಕಟ್ಟೆಯಲ್ಲಿ ಹಗಲು ಹೊತ್ತಿನಲ್ಲೇ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಮಹಿಳೆಯೊಬ್ಬರ ಕೈ, ಎದೆಯ ಭಾಗ ಮತ್ತು ಕಿವಿಗಳನ್ನು ಕತ್ತರಿಸಿದ ನಂತರ ಅವರು ಸಾವಿಗೀಡಾಗಿದ್ದಾರೆ.

ನೀಲಂ ಎನ್ನುವವರು ತನ್ನ ಮಗಳ ಮದುವೆಗಾಗಿ ಶಕೀಲ್ ಮಿಯಾನ್‌ ಎಂಬಾತನಿಂದ ಹಣವನ್ನು ಸಾಲ ಪಡೆದಿದ್ದರು. ಅದನ್ನು ಹಿಂತಿರುಗಿಸಲು ವಿಫಲವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಕೋಮುವಾದಿ ದೃಷ್ಟಿಕೋನವನ್ನು ಪೊಲೀಸರು ನಿರಾಕರಿಸಿದ್ದಾರೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ, ಈ ಪ್ರದೇಶದಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ.

ಶನಿವಾರ ಶಕೀಲ್ ಮಿಯಾನ್ ಮತ್ತು ಜುದ್ದೀನ್ ಮಿಯಾನ್ ಎಂಬುವವರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆಯ ತಲೆ ಮತ್ತು ಬೆನ್ನಿನ ಮೇಲೂ ಇರಿತದ ಗಾಯಗಳಾಗಿವೆ. ಯಾರೊಬ್ಬರೂ ಮಹಿಳೆಯ ಸಹಾಯಕ್ಕೆ ಬಂದಿಲ್ಲ. ಪ್ರಜ್ಞೆ ತಪ್ಪುವ ಮುನ್ನ ನೀಲಂ ತನ್ನ ಮೇಲೆ ಹಲ್ಲೆ ನಡೆಸಿದವರು ಯಾರೆಂದು ಹೇಳಿದ್ದು, ಪ್ರತ್ಯಕ್ಷದರ್ಶಿಗಳು ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಆಸ್ಪತ್ರೆಯಲ್ಲಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಆಕೆಯನ್ನು ಜವಾಹರಲಾಲ್ ನೆಹರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಶಕೀಲ್ ಮಿಯಾನ್ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ.

ಶನಿವಾರ, ಸಿಂಧಿಯಾ ಸೇತುವೆಯ ಬಳಿ ಮಹಿಳೆಯ ಮೇಲೆ ತೀಕ್ಷ್ಣವಾದ ಆಯುಧದಿಂದ ದಾಳಿ ನಡೆಸಲಾಗಿದೆ. ಏನಾಗುತ್ತದೆ ಎಂದು ಜನರು ಅರ್ಥಮಾಡಿಕೊಳ್ಳುವಷ್ಟರಲ್ಲೇ. ದಾಳಿಕೋರರು ತಮ್ಮ ಶಸ್ತ್ರಾಸ್ತ್ರಗಳನ್ನು ಬೀಸುತ್ತಾ ಓಡಿಹೋಗಿದ್ದಾರೆ ಎಂದು ಭಾಗಲ್ಪುರದ ಪೊಲೀಸ್ ವರಿಷ್ಠಾಧಿಕಾರಿ ಸ್ವರ್ಣ ಪ್ರಭಾತ್ ಹೇಳಿದ್ದಾರೆ.

ಮೃತರ ಕುಟುಂಬದವರು ಇಬ್ಬರನ್ನು ಆರೋಪಿಗಳೆಂದು ಹೆಸರಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಮೃತರು ಮತ್ತು ಆರೋಪಿಗಳು ನೆರೆಹೊರೆಯವರಾಗಿದ್ದು, ಸೌಹಾರ್ದ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ತನ್ನ ಮಗಳ ಮದುವೆಗಾಗಿ ಆತನಿಂದ ಹಣವನ್ನು ಪಡೆದಿದ್ದ ಮಹಿಳೆ, ಅದನ್ನು ಹಿಂದಿರುಗಿಸಿರಲಿಲ್ಲ. ಬಳಿಕ ಅವರು ಹರಿತವಾದ ಆಯುಧದಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆ ವೇಳೆ ಜವಾಹರಲಾಲ್ ನೆಹರು ವೈದ್ಯಕೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸ್ವರ್ಣ ಪ್ರಭಾತ್ ಹೇಳಿರುವುದಾಗಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಆತನನ್ನು ತಮ್ಮ ಮನೆಗೆ ಬರುವುದಕ್ಕೆ ನಿರಾಕರಿಸಿದ್ದರಿಂದ ಆಕೆಯನ್ನು ಶಕೀಲ್ ಮಿಯಾನ್ ಕೊಂದಿದ್ದಾನೆ ಎಂದು ಮಹಿಳೆಯ ಪತಿ ಹೇಳಿದ್ದಾರೆ. ಆ ವ್ಯಕ್ತಿ ಆಗಾಗ್ಗೆ ನಮ್ಮ ಮನೆಗೆ ಭೇಟಿ ನೀಡುತ್ತಿದ್ದನು, ಆದರೆ ಹಣಕಾಸಿನ ವಿಚಾರದಲ್ಲಿ ಇಬ್ಬರು ಜಗಳವಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com