MCD ಚುನಾವಣಾ ಫಲಿತಾಂಶ: ಚಂಡೀಗಢ ಆಯ್ತು, ಈಗ ದೆಹಲಿಯ ಸರದಿ; ಮೇಯರ್ ಆಯ್ಕೆ ಬಗ್ಗೆ ಸಂಚಲನ ಮೂಡಿಸಿದ ಬಿಜೆಪಿ ಟ್ವೀಟ್!

ಫಲಿತಾಂಶ ಬಂದಾಯ್ತು. ಇದೀಗ ದೆಹಲಿಯ ಮೇಯರ್ ಆಯ್ಕೆ ಸರದಿ. ಈಗ ನಿಕಟ ಸ್ಪರ್ಧೆಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದೆ.
ಎಎಪಿ ಕಾರ್ಯಕರ್ತರ ಸಂಭ್ರಮ
ಎಎಪಿ ಕಾರ್ಯಕರ್ತರ ಸಂಭ್ರಮ

ನವದೆಹಲಿ: MCD ಚುನಾವಣೆ 2022ರ ಫಲಿತಾಂಶ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದರೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಸ್ವಲ್ಪ ನಿರಾಶೆ ಮೂಡಿಸಿದೆ. ಆದರೆ ಇದೀಗ ದೆಹಲಿಯ ಮೇಯರ್ ಆಯ್ಕೆ ಸರದಿ. ಈಗ ನಿಕಟ ಸ್ಪರ್ಧೆಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದೆ.

ಅಮಿತ್ ಮಾಳವಿಯಾ ಅವರು ದೆಹಲಿ ಮೇಯರ್ ಸ್ಥಾನಕ್ಕಾಗಿ ಬಿಜೆಪಿ ಇನ್ನೂ ಕಾದುನೋಡುತ್ತಿದೆ. ಇನ್ನು ಕೌನ್ಸಿಲರ್‌ಗಳು ಮೇಯರ್ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಉದಾಹರಣೆ ನೀಡಿದ ಅವರು, ಬಿಜೆಪಿ ಉತ್ತಮ ಸ್ಥಿತಿಯಲ್ಲಿಲ್ಲದಿದ್ದರೂ ಚಂಡೀಗಢಕ್ಕೆ ಬಿಜೆಪಿ ಮೇಯರ್ ಇದ್ದಾರೆ ಎಂದು ಹೇಳಿದರು.

ಅಮಿತ್ ಮಾಳವೀಯ ಅವರು, ಚುನಾಯಿತ ಕೌನ್ಸಿಲರ್‌ಗಳು ಯಾವ ಪಕ್ಷದ ಮೇಯರ್‌ಗೆ ಮತ ಹಾಕುತ್ತಾರೆ ಎಂಬುದು ಮುಖ್ಯ. ಚಂಡೀಗಢದಲ್ಲಿ ಬಿಜೆಪಿ ಮೇಯರ್ ಆಗಿದ್ದಾರೆ ಎಂದು ತಮ್ಮ ಟ್ವೀಟ್ ನಲ್ಲಿ ಹೇಳುವ ಮೂಲಕ ದೆಹಲಿಯ ರಾಜಕೀಯ ಕಾರಿಡಾರ್ ನಲ್ಲಿ ಸಂಚಲನ ಮೂಡಿಸಿದ್ದಾರೆ. ಇದಲ್ಲದೇ ಅಮಿತ್ ಮಾಳವೀಯ ಅವರು ಕೇಜ್ರಿವಾಲ್ ಅವರನ್ನು ಇತರ ಟ್ವೀಟ್‌ಗಳಲ್ಲಿ ತೀವ್ರವಾಗಿ ಟೀಕಿಸಿದ್ದಾರೆ.

ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷದ ಕೌನ್ಸಿಲರ್‌ಗಳ ಸಂಖ್ಯೆ ಕಡಿಮೆಯಿದ್ದರೂ, ಕೌನ್ಸಿಲರ್‌ಗಳು ಬಿಜೆಪಿಯ ಮೇಯರ್ ಅನ್ನು ಆಯ್ಕೆ ಮಾಡಿದ್ದಾರೆ. ವಾಸ್ತವವಾಗಿ, ಚಂಡೀಗಢದ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ 35 ವಾರ್ಡ್‌ಗಳಿಗೆ ಚುನಾವಣೆಗಳು ನಡೆದಿದ್ದವು. ಇದರಲ್ಲಿ ಆಮ್ ಆದ್ಮಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಚುನಾವಣೆಯಲ್ಲಿ ಎಎಪಿ 14, ಬಿಜೆಪಿ 12 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದಿತ್ತು.

ಇದಾದ ಬಳಿಕ ಕಾಂಗ್ರೆಸ್‌ನ ಕೌನ್ಸಿಲರ್‌ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಗಮನಾರ್ಹವೆಂದರೆ ಸಂಸದರು ನೀಡಿದ ಒಂದು ಮತ ಈಗಾಗಲೇ ಬಿಜೆಪಿ ಖಾತೆಯಲ್ಲಿತ್ತು. ಈ ಮೂಲಕ ಎಎಪಿ ಮತ್ತು ಬಿಜೆಪಿ 14-14 ಮತಗಳನ್ನು ಪಡೆದಿವೆ. ಅಂತಿಮವಾಗಿ ಬಿಜೆಪಿಯಿಂದ ಮೇಯರ್ ಆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com