ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಮೊದಲ ಗೆಲುವು: ಭೂಪೇಶ್ ಬಘೇಲ್
ಮಲ್ಲಿಕಾರ್ಜನ ಖರ್ಗೆ ಅವರ ನಾಯಕತ್ವದಡಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಮೊದಲ ಗೆಲುವು ಸಿಕ್ಕಿದೆ ಎಂದು ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.
Published: 09th December 2022 04:56 PM | Last Updated: 09th December 2022 05:32 PM | A+A A-

ಭೂಪೇಶ್ ಭಾಘೇಲ್
ಶಿಮ್ಲಾ: ಮಲ್ಲಿಕಾರ್ಜನ ಖರ್ಗೆ ಅವರ ನಾಯಕತ್ವದಡಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಮೊದಲ ಗೆಲುವು ಸಿಕ್ಕಿದೆ ಎಂದು ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಇದು ಮೊದಲ ಗೆಲುವು ಆಗಿದೆ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪ್ರಚಾರ ಕೂಡಾ ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೈ ತೆಕ್ಕೆಗೆ ಹಿಮಾಚಲ ಪ್ರದೇಶ: ಸಿಎಂ ಸ್ಥಾನ ಒಂದು, ಆಂಕಾಂಕ್ಷಿಗಳು ಹಲವರು, ಇಂದು ಕಾಂಗ್ರೆಸ್ ಮಹತ್ವದ ಸಭೆ!
ಇದು ಹಿಮಾಚಲ ಪ್ರದೇಶದ ಜನರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಗೆಲುವು ಆಗಿದೆ. ಪ್ರತಿಯೊಬ್ಬರು ಶ್ರಮ ಪಟ್ಟಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆಶೀರ್ವಾದವೂ ಇದೆ ಎಂದರು. ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ಮಧ್ಯಾಹ್ನ ಬಘೇಲ್ ಶಿಮ್ಲಾಗೆ ಆಗಮಿಸಿದ್ದು, ನೂತನ ಮುಖ್ಯಮಂತ್ರಿಯ ಆಯ್ಕೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.
In Shimla, people of Shimla won, Congress won and workers & leaders won.Everyone was working. Priyanka Gandhi Vadra played the most crucial role. There were blessings of Sonia-Rahul Gandhi. It's the first victory under the leadership of Mallikarjun Kharge as party chief: B Baghel pic.twitter.com/MvlBBg7TW3
— ANI (@ANI) December 9, 2022
ಹಿಮಾಚಲ ಪ್ರದೇಶದಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಬಘೇಲ್ ಹೇಳಿದರು. ಯಾರನ್ನೂ ನಿರ್ಲಕ್ಷಿಸುವುದಿಲ್ಲ. ಪ್ರತಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಪಕ್ಷದ ಶಾಸಕಾಂಗ ಸಭೆ ನಡೆಸಿ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.