ಬಿಎಂಸಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಎಎಪಿ ಸ್ಪರ್ಧಿಸಬೇಕು: ಮಹಾ ಬಿಜೆಪಿ

ಗುಜರಾತ್ ಚುನಾವಣೆಯ ಫಲಿತಾಂಶದಿಂದ ಪ್ರೇರಿತವಾಗಿರುವ ಮಹಾರಾಷ್ಟ್ರ ಬಿಜಪಿ, ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಆಮ್ ಆದ್ಮಿ ಪಕ್ಷ ಸ್ಪರ್ಧಿಸಬೇಕು ಎಂದು...
ಬಿಎಂಸಿ
ಬಿಎಂಸಿ

ಮುಂಬೈ: ಗುಜರಾತ್ ಚುನಾವಣೆಯ ಫಲಿತಾಂಶದಿಂದ ಪ್ರೇರಿತವಾಗಿರುವ ಮಹಾರಾಷ್ಟ್ರ ಬಿಜಪಿ, ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಆಮ್ ಆದ್ಮಿ ಪಕ್ಷ ಸ್ಪರ್ಧಿಸಬೇಕು ಎಂದು ಬಯಸುತ್ತಿದೆ.

ಬಿಎಂಸಿ ಚುನಾವಣೆಯಲ್ಲಿ ತಮ್ಮ ಮುಂದಿನ ತಕ್ಷಣದ ಎದುರಾಳಿ ಎಂದರೆ ಎಎಪಿ ಎಂದು ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೇಲಾರ್ ಅವರು ಹೇಳಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿಯ ಪ್ರಚಂಡ ಮತ್ತು ಐತಿಹಾಸಿಕ ವಿಜಯದ ಕುರಿತು ಪ್ರತಿಕ್ರಿಯಿಸಿದ ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ ಅವರು ತಮ್ಮ ತಕ್ಷಣದ ಪ್ರತಿಸ್ಪರ್ಧಿ ಎಎಪಿ ಎಂದಿದ್ದಾರೆ.

“ಗುಜರಾತ್ ಚುನಾವಣೆಯಲ್ಲಿ ಎಎಪಿ ಪಡೆದ ಮತಗಳು ಮತ್ತು ಸ್ಥಾನಗಳನ್ನು ಪಡೆದ ರೀತಿ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಗೆಲುವು ಬಿಎಂಸಿ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಎದುರಾಳಿ ಎಎಪಿ ಮಾತ್ರ ಎಂದು ತೋರಿಸುತ್ತಿದೆ. ಮುಂಬೈನ ಇತರ ಪಕ್ಷಗಳಿಗೆ ಈಗ ಯಾವುದೇ ಅಸ್ತಿತ್ವ ಇಲ್ಲ” ಎಂದು ಅವರು ಹೇಳಿದ್ದಾರೆ.

ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯು ಮಹಾ ವಿಕಾಸ್ ಅಘಾಡಿ ವಿರುದ್ಧ ಮುಖ್ಯವಾಗಿ ಶಿವಸೇನೆಯ ವಿರುದ್ಧ ಹೋರಾಡಬೇಕಾಗಿದೆ. ಸೇನೆಯು 1997 ರಿಂದ ಕಳೆದ 25 ವರ್ಷಗಳಿಂದ ಬಿಎಂಸಿಯನ್ನು ಆಳುತ್ತಿದೆ. 2017 ರಲ್ಲಿ, ಬಿಜೆಪಿ 83 ಸ್ಥಾನಗಳನ್ನು ಗೆಲ್ಲುವ ಮೂಲಕ ಶಿವಸೇನೆಗೆ ಕಠಿಣ ಸ್ಪರ್ಧೆ ನೀಡಿತ್ತು. 227 ಸದಸ್ಯ ಬಲದ ಬಿಎಂಸಿಯಲ್ಲಿ ಶಿವಸೇನೆ 87 ಸ್ಥಾನಗಳನ್ನು ಗೆದ್ದಿತ್ತು.

ಆದರೆ ಈ ಬಾರಿ ಗುಜರಾತ್‌ನಲ್ಲಿ ಎಎಪಿ ಕಾಂಗ್ರೆಸ್‌ನ ಗಮನಾರ್ಹ ಮತಗಳನ್ನು ಪಡೆಯುವ ಮೂಲಕ 75 ಸ್ಥಾನಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದೆ. ಇದು ಬಿಜೆಪಿಗೆ ನೇರವಾಗಿ ಲಾಭವಾಯಿತು. ನಾವು ಮುಂಬೈನಲ್ಲಿ ಅದೇ ತಂತ್ರವನ್ನು ಬಳಸಲು ಬಯಸುತ್ತೇವೆ. ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲು ಎಎಪಿ ಮತ್ತು ಎಂಎನ್‌ಎಸ್ ಗೆ ಬೆಂಬಲ ನೀಡುತ್ತೇವೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com