ಗುಜರಾತ್‌ಗಿಂತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಪ್ ಉತ್ತಮ ಸಾಧನೆ ಮಾಡಲಿದೆ: ಎಎಪಿ

ಗುಜರಾತ್ ನಂತರ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಗಮನ ಹರಿಸಿರುವ ಆಮ್ ಆದ್ಮಿ ಪಕ್ಷ(ಎಎಪಿ), ತಮ್ಮ ಸ್ವಂತ ಖ್ಯಾತಿಯ ಮೇಲೆ ಗೆಲ್ಲಬಲ್ಲ ಉತ್ತಮ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ.
ಭಾಸ್ಕರ್ ರಾವ್ ಮತ್ತು ಅರವಿಂದ್ ಕೇಜ್ರಿವಾಲ್
ಭಾಸ್ಕರ್ ರಾವ್ ಮತ್ತು ಅರವಿಂದ್ ಕೇಜ್ರಿವಾಲ್

ಬೆಂಗಳೂರು: ಗುಜರಾತ್ ನಂತರ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಗಮನ ಹರಿಸಿರುವ ಆಮ್ ಆದ್ಮಿ ಪಕ್ಷ(ಎಎಪಿ), ತಮ್ಮ ಸ್ವಂತ ಖ್ಯಾತಿಯ ಮೇಲೆ ಗೆಲ್ಲಬಲ್ಲ ಉತ್ತಮ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ.

ಗುಜರಾತ್ ಚುನಾವಣೆಯಲ್ಲಿ ವಿಜಯಶಾಲಿಯಾದ ಐದು ಎಎಪಿ ಅಭ್ಯರ್ಥಿಗಳು "ಹಣ ಬಲ ಮತ್ತು ತೋಳಬಲ"ದಿಂದ ಗೆದ್ದಿಲ್ಲ. ಅವರು ತಮ್ಮದೇ ಆದ ಖ್ಯಾತಿಯ ಮೇಲೆ ಗೆದ್ದಿದ್ದಾರೆ ಎಂದು ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ್ ರಾವ್ ಅವರು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

"ನಾವು ಆ ಮಾರ್ಗವನ್ನು ಇಲ್ಲಿ(ಕರ್ನಾಟಕದಲ್ಲಿ) ಮುಂದುವರಿಸಲು ಬಯಸುತ್ತೇವೆ" ಎಂದ ರಾವ್, ಮೇ ವೇಳೆಗೆ ಚುನಾವಣೆ ನಡೆಯಲಿರುವ ಕರ್ನಾಟಕದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ "ಹೊಸ ಮತ್ತು ಉತ್ತಮ ಅಭ್ಯರ್ಥಿಗಳನ್ನು" ಕಣಕ್ಕಿಳಿಸಿದರೂ "ಗೆಲ್ಲಬಹುದಾದ" 50 ರಿಂದ 60 ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಹರಿಸಲಾಗುವುದು ಎಂದಿದ್ದಾರೆ.

ಕರ್ನಾಟಕದಲ್ಲಿ ನಾವು ಗುಜರಾತ್‌ನಲ್ಲಿ ಮಾಡಿದ್ದಕ್ಕಿಂತ ಉತ್ತಮ ಸಾಧನೆ ಮಾಡುತ್ತೇವೆ. ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಚಾರ ಖಂಡಿತವಾಗಿಯೂ ಪಕ್ಷದ ಬಲ ಹೆಚ್ಚಿಸುತ್ತದೆ ಎಂದು ರಾವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com