ಮಧ್ಯ ಪ್ರದೇಶ: ಸತತ 65 ಗಂಟೆಗಳ ಕಾರ್ಯಾಚರಣೆ; ಕೊಳವೆ ಬಾವಿಗೆ ಬಿದ್ದಿದ್ದ ಎಂಟು ವರ್ಷದ ಬಾಲಕ ಸಾವು

ಮಧ್ಯಪ್ರದೇಶದ ಬೇತುಲ್‌ನಲ್ಲಿ ಡಿಸೆಂಬರ್ 6 ರಂದು 400 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಎಂಟು ವರ್ಷದ ಬಾಲಕ ತನ್ಮಯ್ ಸಾಹು ಮೃತಪಟ್ಟಿದ್ದಾನೆ. 65 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದರೂ ಪ್ರಯೋಜನವಾಗಿಲ್ಲ. ಆತನ ಮೃತದೇಹವನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕೊಳವೆ ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕ ತನ್ಮಯ್ ಸಾಹು
ಕೊಳವೆ ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕ ತನ್ಮಯ್ ಸಾಹು

ಭೋಪಾಲ್: ಮಧ್ಯಪ್ರದೇಶದ ಬೇತುಲ್‌ನಲ್ಲಿ ಡಿಸೆಂಬರ್ 6 ರಂದು 400 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಎಂಟು ವರ್ಷದ ಬಾಲಕ ತನ್ಮಯ್ ಸಾಹು ಮೃತಪಟ್ಟಿದ್ದಾನೆ. 65 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದರೂ ಪ್ರಯೋಜನವಾಗಿಲ್ಲ. ಆತನ ಮೃತದೇಹವನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಈ ಪ್ರದೇಶದಾದ್ಯಂತ ಕಲ್ಲುಗಳು ಹೆಚ್ಚಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಯ ವಿಳಂಬಕ್ಕೆ ಕಾರಣವಾಯಿತು. ನಾಲ್ಕು ದಿನಗಳಿಗಿಂತಲೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಾಲಕನನ್ನು ಹೊರತೆಗೆಯಲಾಗಿದೆ.

ಜಮೀನಿನಲ್ಲಿ ಆಟವಾಡುತ್ತಿದ್ದ ಬಾಲಕ ಬೇರೆ ಹೊಲಕ್ಕೆ ಹೋಗಿ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಬಾಲಕನನ್ನು ಹೊರತರಲು ಸಮಾನಾಂತರ ಸುರಂಗ ಕೊರೆಯಲು ಯಂತ್ರಗಳನ್ನು ತರಲಾಗಿತ್ತು.

ಶುಕ್ರವಾರ ತಡರಾತ್ರಿ ಆತನನ್ನು ಹೊರ ತೆಗೆಯುವವರೆಗೂ ತನ್ಮಯ್ ಸಾಹು 400 ಅಡಿ ಆಳದ ಬೋರ್‌ವೆಲ್‌ನ 55 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಜಿಲ್ಲಾಜಳಿತದ ಪ್ರಕಾರ, ಬಾಲಕನನ್ನು ಹೊರತೆಗೆಯುವಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿಸಿದೆ. ಡಿಸೆಂಬರ್ 6 ರಂದು ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ.

'ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದೆವು. ಆತ ಉಸಿರಾಡುತ್ತಿದ್ದ ಮತ್ತು ನಾವು ವಿಚಾರಿಸಿದಾಗ ನಾವು ಆತನ ಧ್ವನಿಯನ್ನು ಆಲಿಸಿದೆವು. ಡಿಸೆಂಬರ್ 6 ರಂದು ಸಂಜೆ 6 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ' ಎಂದು ಬಾಲಕನ ತಂದೆ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಬಾಲಕನನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಗೃಹ ರಕ್ಷಕ ದಳ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com