40 ಗುಜರಾತ್ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು: ಈ ಪೈಕಿ ಬಿಜೆಪಿಯಲ್ಲೇ ಅಧಿಕ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಗುಜರಾತ್ ಚುನಾವಣಾ ವೀಕ್ಷಕ ವರದಿಯಲ್ಲಿ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಹೊಸದಾಗಿ ಚುನಾಯಿತರಾದ 40 ಶಾಸಕರು ತಮ್ಮ ಚುನಾವಣಾ ಅಫಿಡವಿಟ್‌ಗಳ ಪ್ರಕಾರ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಗುಜರಾತ್ ಚುನಾವಣಾ ವೀಕ್ಷಕ ವರದಿಯಲ್ಲಿ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಹೊಸದಾಗಿ ಚುನಾಯಿತರಾದ 40 ಶಾಸಕರು ತಮ್ಮ ಚುನಾವಣಾ ಅಫಿಡವಿಟ್‌ಗಳ ಪ್ರಕಾರ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.

ಈ 40 ಶಾಸಕರ ಪೈಕಿ 29 ಸದಸ್ಯರು (ಒಟ್ಟು 182ರಲ್ಲಿ ಶೇ 16) ಕೊಲೆ ಮತ್ತು ಅತ್ಯಾಚಾರದಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಎಡಿಆರ್ ವಿಶ್ಲೇಷಣೆ ತೋರಿಸಿದೆ. ಈ 29 ಸದಸ್ಯರ ಪೈಕಿ 20 ಮಂದಿ ಬಿಜೆಪಿ, ನಾಲ್ವರು ಕಾಂಗ್ರೆಸ್, ಇಬ್ಬರು ಆಮ್ ಆದ್ಮಿ ಪಕ್ಷ, ಒಬ್ಬರು ಸಮಾಜವಾದಿ ಪಕ್ಷ ಮತ್ತು ಇಬ್ಬರು ಪಕ್ಷೇತರರಾಗಿದ್ದಾರೆ.

ಡಿಸೆಂಬರ್ 8 ರಂದು ನಡೆದ ಮತ ಎಣಿಕೆ ಮುಕ್ತಾಯಗೊಂಡ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುಜರಾತ್‌ನಲ್ಲಿ ದಾಖಲೆಯ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಏಳನೇ ಅವಧಿಗೆ ಅಧಿಕಾರಕ್ಕೆೇರಿದೆ. ಇನ್ನು ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಐದು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಎಡಿಆರ್ ವರದಿಯ ಪ್ರಕಾರ, ಬಿಜೆಪಿಯ 156 ಶಾಸಕರಲ್ಲಿ 26 (ಶೇ. 17), ಕಾಂಗ್ರೆಸ್‌ನ 17 ಶಾಸಕರಲ್ಲಿ 9 (ಶೇ. 53), ಎಎಪಿಯ ಐದು ಶಾಸಕರಲ್ಲಿ ಇಬ್ಬರು (ಶೇ 40), ಇಬ್ಬರು (ಶೇ 68) ಮೂವರು ಸ್ವತಂತ್ರರು ಮತ್ತು ಸಮಾಜವಾದಿ ಪಕ್ಷದ ಏಕೈಕ ಅಭ್ಯರ್ಥಿ ಕಂಧಲ್ ಜಡೇಜಾ ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದೆ.

ಎಡಿಆರ್ ಚುನಾವಣಾ ಸುಧಾರಣೆಗಳಿಗಾಗಿ ಕೆಲಸ ಮಾಡುತ್ತದೆ ಮತ್ತು ಎಲ್ಲಾ 182 ಹೊಸದಾಗಿ ಚುನಾಯಿತ ಶಾಸಕರ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ ನಂತರ ಇಂತಹ ವರದಿಗಳನ್ನು ಸಿದ್ಧಪಡಿಸುತ್ತದೆ.

2017ಕ್ಕೆ ಹೋಲಿಸಿದರೆ ಈ ಬಾರಿ ಇಂತಹ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಬಾರಿ 47 ಶಾಸಕರು ಈ ರೀತಿಯ ಪ್ರಕರಣಗಳನ್ನು ಎದುರಿಸುತ್ತಿದ್ದರು ಎಂದು ವರದಿ ಹೇಳಿದೆ.

ಕನಿಷ್ಠ ಮೂರು ವಿಜೇತ ಅಭ್ಯರ್ಥಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಈ ಅಭ್ಯರ್ಥಿಗಳು ವಂಸ್ಡಾದ ಕಾಂಗ್ರೆಸ್ ಶಾಸಕ, ಅನಂತ್ ಪಟೇಲ್, ಪಟಾನ್‌ನ ಕಾಂಗ್ರೆಸ್ ಶಾಸಕ, ಕಿರಿತ್ ಪಟೇಲ್ ಮತ್ತು ಉನಾದಿಂದ ಬಿಜೆಪಿ ಶಾಸಕ ಕಲುಭಾಯ್ ರಾಥೋಡ್ ಆಗಿದ್ದಾರೆ.  

ನಾಲ್ವರು ವಿಜೇತ ಅಭ್ಯರ್ಥಿಗಳು ಸೆಕ್ಷನ್ 354 (ಮಹಿಳೆಯರ ಮೇಲಿನ ದೌರ್ಜನ್ಯ) ಅಥವಾ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ ಎಂದು ಅಧ್ಯಯನವು ತೋರಿಸುತ್ತದೆ. ಈ ನಾಲ್ವರಲ್ಲಿ ಬಿಜೆಪಿಯ ಜೇಥಾ ಭಾರವಾಡ್ ಅತ್ಯಾಚಾರದ ಆರೋಪ ಎದುರಿಸುತ್ತಿದ್ದರೆ, ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಬಿಜೆಪಿ ಶಾಸಕ ಜನಕ್ ತಲವಿವಾ ಮತ್ತು ಎಎಪಿ ಶಾಸಕ ಚೈತಾರ್ ವಾಸವ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com