ಪಾಕ್ ಮೂಲದ OTT Vidly TV ಸೇರಿ, 2 ಆ್ಯಪ್, 4 ಸಾಮಾಜಿಕ ಮಾಧ್ಯಮ ಖಾತೆ, ಸ್ಮಾರ್ಟ್ ಟಿವಿ ಆ್ಯಪ್ ಗೆ ಭಾರತ ಸರ್ಕಾರ ನಿರ್ಬಂಧ!
ಪಾಕಿಸ್ತಾನ ಮೂಲದ ಒಟಿಟಿ Vidly TVಯ ವೆಬ್‌ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್‌ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಮಾರ್ಟ್ ಟಿವಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸಲಾಗಿದೆ.
Published: 12th December 2022 11:04 PM | Last Updated: 13th December 2022 01:27 PM | A+A A-

ಪಾಕ್ ಮೂಲದ OTT ನಿಷೇಧ
ನವದೆಹಲಿ: ಪಾಕಿಸ್ತಾನ ಮೂಲದ ಒಟಿಟಿ Vidly TVಯ ವೆಬ್‌ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್‌ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಮಾರ್ಟ್ ಟಿವಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸಲಾಗಿದೆ.
Vidly TV ಹೆಸರಿನ ಒಟಿಟಿಯಲ್ಲಿ ತೋರಿಸುತ್ತಿರುವ ವೆಬ್ ಸರಣಿಯು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆಯುಂಟು ಮಾಡಿದೆ ಎಂದು ಸರ್ಕಾರ ಹೇಳಿದ್ದು, Vidly TVಯ ವೆಬ್‌ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್‌ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಮಾರ್ಟ್ ಟಿವಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರವು ಸೋಮವಾರ ಆದೇಶಿಸಿದೆ.
Govt of India action against Pakistan-based Vidly TV follows the web-series “Sevak: The Confessions”, which was determined to be detrimental to national security, sovereignty and integrity of India, defence of India, security of the State, and public order in the country.
n2— Kanchan Gupta