ಪ್ರಮಾಣ ವಚನ ಸ್ವೀಕರಿಸಿದ ಗುಜರಾತ್ ಹೊಸ ಸಚಿವ ಸಂಪುಟದ 17 ಸದಸ್ಯರ ಪೈಕಿ ಒಬ್ಬರೇ ಮಹಿಳೆ!
ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಪೇಂದ್ರ ಪಟೇಲ್ ಸಂಪುಟದ ಒಟ್ಟು 16 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಗುಜರಾತಿನ ನೂತನ ಸಚಿವ ಸಂಪುಟದ 17 ಸದಸ್ಯರ ಪೈಕಿ ಒಬ್ಬರು ಮಹಿಳೆ ಇದ್ದಾರೆ.
Published: 12th December 2022 05:00 PM | Last Updated: 12th December 2022 05:25 PM | A+A A-

ಎರಡನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭೂಪೇಂದ್ರ ಪಟೇಲ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಪಾಲ್ಗೊಂಡಿದ್ದ ಪ್ರಮಾಣವಚನ ಸಮಾರಂಭದಲ್ಲಿ ಭೂಪೇಂದ್ರ ಪಟೇಲ್ ಸೋಮವಾರ ಎರಡನೇ ಬಾರಿಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಪೇಂದ್ರ ಪಟೇಲ್ ಸಂಪುಟದ ಒಟ್ಟು 16 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಗುಜರಾತಿನ ನೂತನ ಸಚಿವ ಸಂಪುಟದ 17 ಸದಸ್ಯರ ಪೈಕಿ ಒಬ್ಬರು ಮಹಿಳೆ ಇದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನದೇ ಆದ ದಾಖಲೆಯನ್ನು ಮುರಿದು 156 ಸ್ಥಾನಗಳನ್ನು ಗಳಿಸಿದೆ ಮತ್ತು ಭೂಪೇಂದ್ರ ಪಟೇಲ್ ಅವರು ಗುಜರಾತ್‌ನ 18 ನೇ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನೂ ಓದಿ: 2ನೇ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ; ಪ್ರಧಾನಿ ಮೋದಿ, ಬಿಜೆಪಿ ಸಿಎಂಗಳು ಭಾಗಿ
ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಬಳಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ.
1. ಕನು ದೇಸಾಯಿ
2. ರುಷಿಕೇಶ್ ಪಟೇಲ್
3. ರಾಘವ್‌ಜಿ ಪಟೇಲ್
4. ಬಲ್ವಂತ್ ಸಿಂಗ್ ರಜಪೂತ್
5. ಕುನ್ವರ್ಜಿ ಬವಾಲಿಯಾ
6. ಮುಲುಭಾಯಿ ಬೇರಾ
7. ಕುಬೇರಭಾಯಿ ಮನ್ಸುಖಭಾಯಿ ದಿಂಡೋರ್
8. ಭಾನುಬೆನ್ ಬಬಾರಿಯಾ
9. ಹರ್ಷ ಸಾಂಘ್ವಿ
10. ಜಗದೀಶ್ ವಿಶ್ವಕರ್ಮ
11. ಪರಸತ್ತಮ್ ಸೋಲಂಕಿ
12. ಬಾಚುಭಾಯಿ ಖಬದ್
13. ಮುಕೇಶಭಾಯ್ ಜಿನ್ಭಾಯಿ ಪಟೇಲ್
14. ಭಿಖುಭಾಯಿ ಪರ್ಮಾರ್
15. ಪ್ರಫುಲ್ ಪನ್ಸೇರಿಯಾ ಕಾಮ್‌ರೇಜ್