ಉ.ಪ್ರದೇಶ: ಹಳಿ ಮೇಲೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹರಿದ ರೈಲು, ದಂಪತಿ ಸೇರಿ ಮೂವರ ಸಾವು!
ರೈಲ್ವೇ ಹಳಿ ಮೇಲೆ ವಿಡಿಯೋ ಮಾಡುತ್ತಿದ್ದ ವೇಳೆ ರೈಲು ಹರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಘಟನೆಯಲ್ಲಿ ದಂಪತಿ ಸೇರಿ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Published: 15th December 2022 09:32 PM | Last Updated: 19th December 2022 11:13 AM | A+A A-

ಸಂಗ್ರಹ ಚಿತ್ರ
ಗಾಜಿಯಾಬಾದ್: ರೈಲ್ವೇ ಹಳಿ ಮೇಲೆ ವಿಡಿಯೋ ಮಾಡುತ್ತಿದ್ದ ವೇಳೆ ರೈಲು ಹರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಘಟನೆಯಲ್ಲಿ ದಂಪತಿ ಸೇರಿ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗಾಜಿಯಾಬಾದ್‌ನ ರೈಲ್ವೆ ಹಳಿಯಲ್ಲಿ "ಮೊಬೈಲ್ ಫೋನ್‌ಗಳಲ್ಲಿ ವೀಡಿಯೊ" ಮಾಡುತ್ತಿದ್ದಾಗ ವೇಗವಾಗಿ ಬಂದ ರೈಲು ದಂಪತಿ ಸೇರಿದಂತೆ ಮೂವರ ಮೇಲೆ ಹರಿದಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಮಸೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲೂ ಗರ್ಹಿ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗೋಧ್ರಾ ರೈಲಿಗೆ ಬೆಂಕಿ ಪ್ರಕರಣ: 17 ವರ್ಷಗಳ ನಂತರ ಜೀವಾವಧಿ ಅಪರಾಧಿಗೆ ಸುಪ್ರೀಂನಿಂದ ಜಾಮೀನು
ಘಟನೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲು ಅವರು ತಮ್ಮ ಮೊಬೈಲ್ ಫೋನ್‌ಗಳಿಂದ ವೀಡಿಯೊಗಳನ್ನು ಮಾಡುತ್ತಿದ್ದರು. ಅವರು ವೀಡಿಯೊ ಚಿತ್ರೀಕರಣದಲ್ಲಿ ಎಷ್ಟು ತಲ್ಲೀನರಾಗಿದ್ದರು ಎಂದರೆ ಹಳೆ ದೆಹಲಿಯಿಂದ ಪ್ರತಾಪ್‌ಗಢ ಜಂಕ್ಷನ್‌ಗೆ ಹೋಗುವ ಪದ್ಮಾವತ್ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲು ತಮ್ಮ ದಾರಿಯಲ್ಲಿ ಬರುತ್ತಿರುವುದನ್ನು ಗಮನಿಸಲಿಲ್ಲ. ರೈಲಿನ ಶಬ್ದವನ್ನು ಕೂಡ ಕೇಳಿಕೊಳ್ಳದ ರೀತಿಯಲ್ಲಿ ಅವರು ವಿಡಿಯೋ ಮಾಡುವುದರಲ್ಲಿ ಮಗ್ನರಾಗಿದ್ದರು. ಹೀಗಾಗಿ ವೇಗವಾಗಿ ಬಂದ ರೈಲು ಮೂವರ ಮೇಲೆ ಹರಿದಿದೆ ಎಂದು ಪೊಲೀಸ್ ಉಪ ಆಯುಕ್ತ (ಗ್ರಾಮೀಣ) ಇರಾಜ್ ರಾಜಾ ಹೇಳಿದ್ದಾರೆ.
ಮೃತರನ್ನು ಮಸೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಶಾಹಿದ್ ಕಾಲೋನಿಯ ನದೀಮ್ (23 ವರ್ಷ), ಅವರ ಪತ್ನಿ ಜೈನಾಬ್ (20 ವರ್ಷ) ಮತ್ತು ಶಕೀಲ್ (30 ವರ್ಷ) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.