ಗುಜರಾತ್: ಸಾಲ ಹಿಂತಿರುಗಿಸಲು ವಿಫಲವಾದ ಪತಿ, ಆತನ ಪತ್ನಿಯ ಮೇಲೆ ಪದೇ ಪದೇ ಅತ್ಯಾಚಾರ
ಗುಜರಾತ್‌ನ ಅಹಮದಾಬಾದ್‌ನಲ್ಲಿ ಪಡೆದುಕೊಂಡಿದ್ದ ಸಾಲವನ್ನು ಹಿಂತಿರುಗಿಸಲು ವಿಫಲನಾದ ಆಟೋರಿಕ್ಷಾ ಚಾಲಕನ 37 ವರ್ಷದ ಪತ್ನಿ ಮೇಲೆ ಅತ್ಯಾಚಾರ ಎಸಲಾಗಿದೆ.
Published: 18th December 2022 10:44 AM | Last Updated: 18th December 2022 10:44 AM | A+A A-

ಸಂಗ್ರಹ ಚಿತ್ರ
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಪಡೆದುಕೊಂಡಿದ್ದ ಸಾಲವನ್ನು ಹಿಂತಿರುಗಿಸಲು ವಿಫಲನಾದ ಆಟೋರಿಕ್ಷಾ ಚಾಲಕನ 37 ವರ್ಷದ ಪತ್ನಿ ಮೇಲೆ ಅತ್ಯಾಚಾರ ಎಸಲಾಗಿದೆ.
ಅಜಿತ್‌ಸಿನ್ಹ್ ಚಾವ್ಡಾ ಎಂಬ ಖಾಸಗಿ ಫೈನಾನ್ಷಿಯರ್ ಮತ್ತು ಅವರ ಬ್ಯುಸಿನೆಸ್ ಪಾಲುದಾರರಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಹೀಗಾಗಿ ಅತ್ಯಾಚಾರ ಸಂತ್ರಸ್ತೆಯ ಪತಿ ಪ್ರತಿದಿನ ಬಡ್ಡಿಯಾಗಿ 1,500 ರೂ ಪಾವತಿಸುವಂತೆ ಚಾವ್ಡಾ ಹೇಳಿದ್ದರು. ಆದರೆ, ಸಂತ್ರಸ್ತೆಯ ಪತಿ ಹಣ ಪಾವತಿಸಲು ವಿಫಲವಾದಾಗ, ಚಾವ್ಡಾ ಅವರ ಮನೆಗೆ ಬಲವಂತವಾಗಿ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಕೃತ್ಯವನ್ನು ಚಿತ್ರೀಕರಿಸಿದ್ದಾನೆ.
ಇಷ್ಟೇ ಅಲ್ಲದೆ, ಚಾವ್ಡಾ ಆಟೋ ರಿಕ್ಷಾ ಚಾಲಕನ ಹೆಂಡತಿಯನ್ನು ಬಲವಂತವಾಗಿ ದೇವಸ್ಥಾನಕ್ಕೆ ಕರೆದೊಯ್ದು ಅವಳ ಹಣೆಗೆ 'ಸಿಂಧೂರ' ಹಚ್ಚಿ ಅವಳನ್ನು ತನ್ನ ಹೆಂಡತಿ ಎಂದು ಘೋಷಿಸಿದ್ದಾನೆ. ಬಳಿಕ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಭೇಟಿ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಐಎಎನ್‌ಎಸ್ ವರದಿ ತಿಳಿಸಿದೆ.
ಸಂತ್ರಸ್ತೆ ತನ್ನ ದೂರನ್ನು ದಾಖಲಿಸಲು ಆರಂಭದಲ್ಲಿ ರಾಜ್‌ಕೋಟ್ ತಾಲೂಕು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಆಕೆ ನ್ಯಾಯಾಲಯದ ಮೊರೆ ಹೋಗಿದ್ದು, ನಂತರ ನ್ಯಾಯಾಲಯ ಆಕೆ ವಿರುದ್ಧದ ಅತ್ಯಾಚಾರದ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ: ಛತ್ತೀಸ್‌ಗಢ: 8 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆಗೈದ ಅಪ್ರಾಪ್ತನ ಬಂಧನ
ತನ್ನ ವಿರುದ್ಧ ದೂರು ದಾಖಲಿಸಲಾಗುವುದು ಎಂದು ತಿಳಿದ ಚಾವ್ಡಾ, ಸಂತ್ರಸ್ತೆಯ ಪತಿಯನ್ನು ಭೇಟಿ ಮಾಡಿ ಆತನ ಹೆಂಡತಿಗೆ ಹಣ ಪಾವತಿಸುವ ಜೊತೆಗೆ ಸಾಲದ ಮೊತ್ತವನ್ನು ಮರುಪಾವತಿ ಮಾಡುವುದರಿಂದ ವಿನಾಯಿತಿ ನೀಡುವುದಾಗಿ ಆಮಿಷ ಒಡ್ಡಿದ್ದಾನೆ.
ಆದರೆ, ಚಾವ್ಡಾ ಮತ್ತು ಅವನ ಜೊತೆಗಿದ್ದ ಇಬ್ಬರು ಸಹಚರರು ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಇದರಿಂದಾಗಿ ಆಕೆಯ ಕೈಗೆ ಗಾಯವಾಗಿದೆ. ಈ ಮಧ್ಯೆ, ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ.