ತಂತ್ರಜ್ಞಾನಕ್ಕೆ ಜವಾಬ್ದಾರಿಯುತ ನಿಯಂತ್ರಣದ ಅಗತ್ಯವಿದೆ: ಗೂಗಲ್ ಸಿಇಒ ಸುಂದರ್ ಪಿಚೈ

ತಂತ್ರಜ್ಞಾನಕ್ಕೆ ಜವಾಬ್ದಾರಿಯುತ ನಿಯಂತ್ರಣದ ಅಗತ್ಯವಿದೆ. ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. 
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗೂಗಲ್ ಸಿಇಒ ಸುಂದರ್ ಪಿಚೈ
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗೂಗಲ್ ಸಿಇಒ ಸುಂದರ್ ಪಿಚೈ

ನವದೆಹಲಿ: ತಂತ್ರಜ್ಞಾನಕ್ಕೆ ಜವಾಬ್ದಾರಿಯುತ ನಿಯಂತ್ರಣದ ಅಗತ್ಯವಿದೆ. ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. 

ದೆಹಲಿಯಲ್ಲಿ ನಿನ್ನೆ ನಡೆದ ಗೂಗಲ್ ಫಾರ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮುಂದಿನ ವರ್ಷ ಮೂರು ಹೊಸ ಕಾನೂನುಗಳಾದ ಟೆಲಿಕಾಂ ಬಿಲ್, ಡೇಟಾ ಪ್ರೊಟೆಕ್ಷನ್ ಬಿಲ್ ಮತ್ತು ಡಿಜಿಟಲ್ ಇಂಡಿಯಾ ಆಕ್ಟ್ ನ್ನು ಪರಿಚಯಿಸುವ ಯೋಜನೆ ಸರ್ಕಾರದ್ದಾಗಿದ್ದು ಈ ಸಂದರ್ಭದಲ್ಲಿ ಪಿಚೈ ಹೇಳಿಕೆ ಮಹತ್ವ ಪಡೆದಿದೆ.

ಭಾರತ ಸರ್ಕಾರವು ಕಂಪನಿಗಳಿಗೆ ಹೊಸತನವನ್ನು ನೀಡಲು ಅವಕಾಶಗಳನ್ನು ನೀಡುವ ಕಾನೂನನ್ನು ಸಿದ್ಧಪಡಿಸುವಂತೆ ಪಿಚೈ ಸಲಹೆ ನೀಡಿದರು. ನೀವು ನವೀನ ಚೌಕಟ್ಟನ್ನು ರಚಿಸುತ್ತಿದ್ದೀರಿ ಇದರಿಂದ ಕಂಪನಿಗಳು ಕಾನೂನು ಚೌಕಟ್ಟಿನಲ್ಲಿ ಖಚಿತತೆಯ ಮೇಲೆ ಹೊಸತನವನ್ನು ಬೆಳೆಸಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಟೆಲಿಕಾಂ ಸಚಿವ ಅಶ್ವನಿ ವೈಷ್ಣವ್ ಅವರು, ಕಾನೂನು ಮತ್ತು ನಿಯಂತ್ರಣ ಚೌಕಟ್ಟುಗಳು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿರಬೇಕು, ಮುಂಬರುವ ಮೂರು ಕಾನೂನುಗಳು ಸರಿಯಾದ ದಿಕ್ಕಿನಲ್ಲಿವೆ ಎಂದು ಹೇಳಿದರು.

ಭಾರತದ G20 ಅಧ್ಯಕ್ಷ ಸ್ಥಾನಕ್ಕೆ ಪಿಚೈ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವನ್ನು ನೀಡಿದರು. ಸಣ್ಣ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳು, ಸೈಬರ್‌ ಸೆಕ್ಯುರಿಟಿ ಮತ್ತು ಕೃತಕ ಬುದ್ಧಿಮತ್ತೆ (AI)ಯನ್ನು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಒಳಗೊಂಡಂತೆ ಗೂಗಲ್ ಕೈಗೊಂಡ ಪ್ರಯತ್ನಗಳ ಕುರಿತು ಸುಂದರ್ ಪಿಚೈ ಪ್ರಧಾನಿಗೆ ತಿಳಿಸಿದರು.

ಐಐಟಿ ಮದ್ರಾಸ್‌ನಲ್ಲಿ ಭಾರತದ ಮೊದಲ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ಸ್ಥಾಪಿಸಲು Google $ 1 ಮಿಲಿಯನ್ ಅನುದಾನವನ್ನು ಘೋಷಿಸಿತು ಮತ್ತು ಉತ್ತಮ ಕೃಷಿ ಫಲಿತಾಂಶಗಳಿಗಾಗಿ ಸುಧಾರಿತ ತಂತ್ರಜ್ಞಾನವನ್ನು ಬಳಸುವುದಕ್ಕಾಗಿ Google.Org ಮೂಲಕ ವಧ್ವಾನಿ AI ಗೆ ಮತ್ತೊಂದು $ 1 ಮಿಲಿಯನ್ ಅನುದಾನವನ್ನು ಘೋಷಿಸಿತು.

ಗೂಗಲ್ 100 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಧ್ವನಿ ಮತ್ತು ಪಠ್ಯ ಹುಡುಕಾಟವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಕೃತಕ ಬುದ್ಧಿಮತ್ತೆ ಮಾದರಿಯನ್ನು ನಿರ್ಮಿಸುತ್ತಿದೆ ಎಂದು ಪಿಚೈ ಹೇಳಿದರು, ಇದು ಲಕ್ಷಾಂತರ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ
ಅಂತರ್ಜಾಲವನ್ನು ಕೈಗೆಟುಕುವಂತೆ ಮಾಡಲು 2020 ರ ಕೊನೆಯಲ್ಲಿ ಪ್ರಾರಂಭಿಸಲಾದ ತನ್ನ `75,000 ಕೋಟಿ ಇಂಡಿಯಾ ಡಿಜಿಟೈಸೇಶನ್ ಫಂಡ್ ಮೂಲಕ ಮಹಿಳಾ ನೇತೃತ್ವದ ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಗೂಗಲ್ ಗಮನಹರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com