ಯುಪಿ: ಒಬಿಸಿಗೆ ಮೀಸಲಾತಿ ನೀಡಿದ ಬಳಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಿಎಂ ಯೋಗಿ

ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಯೋಗಿ ಆದಿತ್ಯನಾಥ್ ಸರ್ಕಾರವು ನಾಗರಿಕ ಸಂಸ್ಥೆಗಳಲ್ಲಿ ತ್ರಿವಳಿ ಪರೀಕ್ಷಾ ಪ್ರಕ್ರಿಯೆಯ ಮೂಲಕ ಒಬಿಸಿಗಳಿಗೆ ಕೋಟಾವನ್ನು ನಿಗದಿಪಡಿಸಿದ ನಂತರವೇ ಚುನಾವಣೆಗೆ ಹೋಗಲು ಆಲೋಚಿಸುತ್ತಿರುವುದರಿಂದ ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬವಾಗುತ್ತಿದೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಯೋಗಿ ಆದಿತ್ಯನಾಥ್ ಸರ್ಕಾರವು ನಾಗರಿಕ ಸಂಸ್ಥೆಗಳಲ್ಲಿ ತ್ರಿವಳಿ ಪರೀಕ್ಷಾ ಪ್ರಕ್ರಿಯೆಯ ಮೂಲಕ ಒಬಿಸಿಗಳಿಗೆ ಕೋಟಾವನ್ನು ನಿಗದಿಪಡಿಸಿದ ನಂತರವೇ ಚುನಾವಣೆಗೆ ಹೋಗಲು ಆಲೋಚಿಸುತ್ತಿರುವುದರಿಂದ ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬವಾಗುತ್ತಿದೆ.

ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸೌರಭ್ ಲಾವಾನಿಯಾ ಅವರ ವಿಭಾಗೀಯ ಪೀಠವು ಉತ್ತರ ಪ್ರದೇಶ ಡಿಸೆಂಬರ್ 5ರಂದು ಒಬಿಸಿ ಮೀಸಲಾತಿ ನೀಡುವ ಸಂಬಂಧ ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ವಿಭಾಗೀಯ ಪೀಠ ರದ್ದುಗೊಳಿಸಿತ್ತು. 

ಇಂದು ಪತ್ರಿಕಾ ಹೇಳಿಕೆ ನೀಡಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್, ತ್ರಿವಳಿ ಪರೀಕ್ಷೆಯ ಆಧಾರದ ಮೇಲೆ ಒಬಿಸಿಗಳಿಗೆ ಮೀಸಲಾತಿಯನ್ನು ನೀಡಲು ರಾಜ್ಯವು ಆಯೋಗವನ್ನು ರಚಿಸಲಿದೆ. ಒಬಿಸಿಗಳಿಗೆ ಮೀಸಲಾತಿ ನೀಡಿದ ನಂತರವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲಾಗುವುದು. ಹೈಕೋರ್ಟ್‌ನ ಆದೇಶವನ್ನು ಅಧಿಕಾರಿಗಳು ಕೂಲಂಕುಷವಾಗಿ ಅಧ್ಯಯನ ನಡೆಸುತ್ತಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ಕಾನೂನು ಅಂಶಗಳನ್ನು ರಾಜ್ಯ ಸರ್ಕಾರ ಪರಿಗಣಿಸಲಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಇನ್ನು ಅಗತ್ಯಬಿದ್ದರೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಯುಪಿ ಸಿಎಂ ಹೇಳಿದ್ದಾರೆ.

ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ನಂತರವೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಯುಪಿ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಹೇಳಿದ್ದಾರೆ. ಆದಾಗ್ಯೂ, ಒಬಿಸಿಗಳ ಹಕ್ಕುಗಳಲ್ಲಿ ಯಾವುದೇ ರಾಜಿ ಇಲ್ಲ ಎಂದು ಮೌರ್ಯ ಹೇಳಿದರು.

ಹೈಕೋರ್ಟ್ ಆದೇಶದ ನಂತರ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ರಾಜ್ಯ ಸರ್ಕಾರವನ್ನು "ಒಬಿಸಿ ಮೀಸಲಾತಿ ವಿರೋಧಿ" ಎಂದು ಕರೆದಿದ್ದು ಈ ವಿಷಯದ ಬಗ್ಗೆ 'ಮೊಸಳೆ ಕಣ್ಣೀರು' ಸುರಿಸುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, ಇಂದು ಬಿಜೆಪಿ ಒಬಿಸಿಗಳಿಂದ ಮೀಸಲಾತಿಯ ಹಕ್ಕನ್ನು ಕಸಿದುಕೊಂಡಿದೆ. ನಾಳೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಖಾತರಿಪಡಿಸಿದ ಎಸ್ಸಿ / ಎಸ್ಟಿ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಟ್ವೀಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com