LAC ಉದ್ದಕ್ಕೂ ಅರುಣಾಚಲದ ಕಾರ್ಯತಂತ್ರದ ಮಜಾ ಪ್ರದೇಶವನ್ನು 'BRO' ಸಂಪರ್ಕ

ಚೀನಾ-ಭಾರತ ಗಡಿ ಪ್ರದೇಶ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚಾಲ್ತಿಯಲ್ಲಿರುವ ಉದ್ವಿಗ್ನತೆಯ ನಡುವೆಯೇ ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಚೀನಾ-ಭಾರತ ಗಡಿ ಪ್ರದೇಶ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚಾಲ್ತಿಯಲ್ಲಿರುವ ಉದ್ವಿಗ್ನತೆಯ ನಡುವೆಯೇ ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ಮಹತ್ವದ ಮೈಲಿಗಲ್ಲು ಸಾಧಿಸಿದೆ.

 ಬಿಆರ್ ಒ ಯಾಂಗ್ಟ್ಸೆ ನಂತರ ಮತ್ತೊಂದು ಪ್ರಮುಖ ಪ್ರದೇಶವನ್ನು ಸಂಪರ್ಕಿಸಿದ್ದು, ಬುಧವಾರ ಈ ಸಾಧನೆ ಮಾಡಲು BRO ಸಿಬ್ಬಂದಿ ಮತ್ತು ಯಂತ್ರೋಪಕರಣಗಳು ಭಾರೀ ಮಳೆ, ಕಠಿಣ ಭೂಪ್ರದೇಶ ಮತ್ತು ಅಪಾಯಕಾರಿ ಕೆಲಸದ ಪರಿಸ್ಥಿತಿಗಳ ಮೂಲಕ ಹಗಲಿರುಳು ಶ್ರಮಿಸಿ ಮಜಾ ಪ್ರದೇಶ ಸಂಪರ್ಕಿಸಿ ರಸ್ತೆ ನಿರ್ಮಾಣ ಮಾಡಿದೆ.

“BRO ದ ಅರುಣಾಂಕ್ ಯೋಜನೆ ಅರುಣಾಚಲ ಪ್ರದೇಶದ TCC-ಮಜಾ ರಸ್ತೆಯಲ್ಲಿರುವ ಉತ್ತರ ಗಡಿಯುದ್ದಕ್ಕೂ ಆಯಕಟ್ಟಿನ ಸ್ಥಳವಾದ ಮಜಾಗೆ ಸಂಪರ್ಕವನ್ನು ಸಾಧಿಸಿದ್ದು, BRO ಸಂಸ್ಥೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಅಪಾರ ಹೆಮ್ಮೆಪಡುತ್ತದೆ ಎಂದು BRO ಮಾಹಿತಿ ನೀಡಿದೆ.

1962 ರಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಪ್ರಮುಖ ಯುದ್ಧದಲ್ಲಿ ಹೋರಾಡಿದ ಮೇಲ್ ಸುಬನ್ಸಿರಿ ಜಿಲ್ಲೆಯಲ್ಲಿ ಮಜಾ ನೆಲೆಗೊಂಡಿದೆ. ಈ ಭೂಪ್ರದೇಶವು ಒರಟಾದ ಮತ್ತು ಪರ್ವತಮಯವಾಗಿದ್ದು, 7,000 ಅಡಿಗಳಿಂದ 18,000 ಅಡಿಗಳವರೆಗಿನ ಶಿಖರಗಳಿಂದ ಕೂಡಿದೆ. ಸೈಟ್ ಅಧಿಕಾರಿ ಕ್ಯಾಪ್ಟನ್ ಸತ್ಯಂ ಅವರ ನೇತೃತ್ವದಲ್ಲಿ ಈ ನಿರ್ಮಾಣ ಕಾರ್ಯ ಮಾಡಲಾಗಿದೆ.

128 ರಸ್ತೆ ನಿರ್ಮಾಣ ಕಂಪನಿ (RCC)ಯ ಲೆಫ್ಟಿನೆಂಟ್ ಕರ್ನಲ್ ಅಭಿಮನ್ಯು ಕಾಡಿಯಾನ್ ಅವರು ಆರ್‌ಸಿಸಿಯ ಕಮಾಂಡಿಂಗ್ (OC) ಅಧಿಕಾರಿಯಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com