ಜಮ್ಮು-ಕಾಶ್ಮೀರ: ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್'ಗೆ ಸೇರಿದ ಕಟ್ಟಡ ನೆಲಸಮ ಮಾಡಿದ ಅಧಿಕಾರಿಗಳು
ಅನಂತನಾಗ್‌ನ ಪಹಲ್ಗಾಮ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಅಮೀರ್ ಖಾನ್‌ಗೆ ಸೇರಿದ ಒಂದು ಮಾಳಿಗೆಯ ಕಟ್ಟಡವನ್ನು ಜಮ್ಮು ಮತ್ತು ಕಾಶ್ಮೀರದ ನಾಗರಿಕ ಆಡಳಿತ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
Published: 31st December 2022 01:28 PM | Last Updated: 31st December 2022 01:28 PM | A+A A-

ಕಟ್ಟಡ ನೆಲಸಮ ಮಾಡುತ್ತಿರುವುದು.
ಶ್ರೀನಗರ: ಅನಂತನಾಗ್‌ನ ಪಹಲ್ಗಾಮ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಅಮೀರ್ ಖಾನ್‌ಗೆ ಸೇರಿದ ಒಂದು ಮಾಳಿಗೆಯ ಕಟ್ಟಡವನ್ನು ಜಮ್ಮು ಮತ್ತು ಕಾಶ್ಮೀರದ ನಾಗರಿಕ ಆಡಳಿತ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಪಹಲ್ಗಾಮ್‌ನ ಲೆವಾರ್ ಗ್ರಾಮದಲ್ಲಿ ಭಯೋತ್ಪಾದಕ ಗುಂಪು ಹಿಜ್ಬುಲ್ ಮುಜಾಹಿದ್ದೀನ್‌ನ ಕಮಾಂಡರ್ ಅಮೀರ್ ಖಾನ್‌ಗೆ ಸೇರಿದ ಒಂದು ಅಂತಸ್ತಿನ ಕಟ್ಟಡವಿದ್ದು, ಈ ಕಟ್ಟಡವನ್ನು ಇಂದು ಬೆಳಗಿನ ಜಾವ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಆಡಳಿತದ ಜಂಟಿ ಕಾರ್ಯಾಚರಣೆ ತಂಡವು ಅನಂತನಾಗ್ ಜಿಲ್ಲೆಯ ಲೆವಾರ್ ಗ್ರಾಮದಲ್ಲಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಕಟ್ಟಡ ನೆಲಸಮ ಕಾರ್ಯಾಚರಣೆ ನಡೆಸಲಾಯಿತು.
ಸರ್ಕಾರಿ ಭೂಮಿಯನ್ನು ಅತಿಕ್ರಣ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಈ ಕಟ್ಟಡ ಹಿಜ್ಬುಲ್ ಕಮಾಂಡರ್ ಅಮೀರ್ ಖಾನ್'ಗೆ ಸೇರಿದ್ದಾಗಿದ್ದು, ಕಟ್ಟಡ ಗೋಡೆಯನ್ನು ಬುಲ್ಡೋಜರ್ ನೆಲಸಮಗೊಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಣಿವೆ ರಾಜ್ಯವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಮತ್ತು ಸರ್ಕಾರದ ಮೇಲೆ ಜನರಿಗೆ ನಂಬಿಕೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.