ಜಗತ್ತಿನ ದೃಷ್ಟಿಯಲ್ಲಿ ಭಾರತ ಈಗ ಜಾಗತಿಕ ಸಮಸ್ಯೆ ಪರಿಹಾರಕ್ಕೆ ಕೊಡುಗೆ ನೀಡುವ ರಾಷ್ಟ್ರ: ವಿದೇಶಾಂಗ ಸಚಿವ ಜೈಶಂಕರ್

ಜಗತ್ತಿನ ದೃಷ್ಟಿಯಲ್ಲಿ ಭಾರತ ಈಗ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಕೊಡುಗೆ ನೀಡುವ ರಾಷ್ಟ್ರವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 
ಸೈಪ್ರಸ್ ನಲ್ಲಿ ಭಾರತೀಯ ಉದ್ಯಮಿಗಳ ಸಮುದಾಯವನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್
ಸೈಪ್ರಸ್ ನಲ್ಲಿ ಭಾರತೀಯ ಉದ್ಯಮಿಗಳ ಸಮುದಾಯವನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್

ಸೈಪ್ರಸ್: ಜಗತ್ತಿನ ದೃಷ್ಟಿಯಲ್ಲಿ ಭಾರತ ಈಗ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಕೊಡುಗೆ ನೀಡುವ ರಾಷ್ಟ್ರವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 

ಸೈಪ್ರಸ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಜೈಶಂಕರ್, ಜಾಗತಿಕ ಸಮುದಾಯಕ್ಕೆ ಈಗ ಭಾರತದಿಂದ ಸಾಕಷ್ಟು ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ. 

ಜಗತ್ತು ಭಾರತವನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡುವ ರಾಷ್ಟ್ರ ಹಾಗೂ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶವನ್ನಾಗಿ ನೋಡುತ್ತಿದೆ. ಭಾರತವನ್ನು ಜಗತ್ತು ಗಟ್ಟಿಯಾಗಿ ನಿಲ್ಲುವ ರಾಷ್ಟ್ರ ಎಂದು ಗುರುತಿಸುತ್ತಿದ್ದು, ಒಂದೇ ಬಾರಿಗೆ ಹಲವರನ್ನು ಒಂದೇ ವೇದಿಕೆಗೆ ಕರೆತರುವ ಸಾಮರ್ಥ್ಯ ಹೊಂದಿರುವ ದೇಶವೆಂಬ ದೃಷ್ಟಿ ಹೊಂದಿದೆ ಎಂದು ಜೈಶಂಕರ್ ಹೇಳಿದ್ದಾರೆ.
 
ಭಾರತ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ದೇಶದ ವೈವಿಧ್ಯತೆಯನ್ನು ಜಾಗತಿಕ ಸಮುದಾಯ ಮತ್ತಷ್ಟು ಅರ್ಥಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸುವ ನಿಟ್ಟಿನಲ್ಲಿ ಅಧ್ಯಕ್ಷತೆಯನ್ನು ಭಾರತ ನಿಭಾಯಿಸಲಿದೆ ಎಂದು ಜೈಶಂಕರ್ ವಿಶ್ವಸ ವ್ಯಕ್ತಪಡಿಸಿದ್ದಾರೆ. 

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ದೇಶಕ್ಕೆ 3-4 ವರ್ಷಗಳ ನಂತರ ಭೇಟಿ ನೀಡಿದಾಗ ಬದಲಾಗಿರುವ ಭಾರತವನ್ನು ನೋಡಲಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.

ಇದೇ ವೇಳೆ ಭಾರತ ಕೋವಿಡ್-19 ನಿಭಾಯಿಸಿದ ರೀತಿಯನ್ನೂ ಭಾರತೀಯ ಸಮುದಾಯಕ್ಕೆ ತಿಳಿಸಿರುವ ಜೈಶಂಕರ್, ಭಾರತ ಕೋವಿಡ್-19 ನ್ನು ಕೇವಲ ನಿಭಾಯಿಸಿಲ್ಲ, ಬದಲಾಗಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆ. ಅತ್ಯುತ್ತಮ ತಲುಪಿಸುವ ವ್ಯವಸ್ಥೆ, ಅತ್ಯುತ್ತಮ ಸಾಮಾಜಿಕ-ಡಿಜಿಟಲ್ ಡೆಲಿವರಿ ವ್ಯವಸ್ಥೆ ಮೂಲಕ ಕೋವಿಡ್-19 ಸಾಂಕ್ರಾಮಿಕದಿಂದ ಹೊರಬಂದಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com