ಅಗ್ನಿಪಥ್ ಯೋಜನೆ: ಐಎಎಫ್ ಗೆ ಈ ವರೆಗೂ ದಾಖಲೆಯ 7.5 ಲಕ್ಷ ಅರ್ಜಿ; ನೇಮಕಾತಿ ಪ್ರಕ್ರಿಯೆ ಇತಿಹಾಸದಲ್ಲೇ ಗರಿಷ್ಠ!

ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತಾದರೂ ಭಾರತೀಯ ವಾಯುಪಡೆ (ಐಎಎಫ್) ಗೆ ಈ ಬಾರಿ ಅಗ್ನಿಪಥ್ ಯೋಜನೆಯಡಿ ಸೇರಲು ದಾಖಲೆಯ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ವಾಯುಪಡೆ ತಿಳಿಸಿದೆ.
ಐಎಎಫ್ (ಸಂಗ್ರಹ ಚಿತ್ರ)
ಐಎಎಫ್ (ಸಂಗ್ರಹ ಚಿತ್ರ)

ನವದೆಹಲಿ: ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತಾದರೂ ಭಾರತೀಯ ವಾಯುಪಡೆ (ಐಎಎಫ್) ಗೆ ಈ ಬಾರಿ ಅಗ್ನಿಪಥ್ ಯೋಜನೆಯಡಿ ಸೇರಲು ದಾಖಲೆಯ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ವಾಯುಪಡೆ ತಿಳಿಸಿದೆ.

ಈ ವರೆಗೂ 7.5 ಲಕ್ಷ ಅರ್ಜಿಗಳು ಬಂದಿದ್ದು, ನೇಮಕಾತಿ ಪ್ರಕ್ರಿಯೆಯ ಇತಿಹಾಸದಲ್ಲೇ ಇದು ಗರಿಷ್ಠ ಸಂಖ್ಯೆಯ ಅರ್ಜಿ ಎಂದು ಐಎಎಫ್ ಹೇಳಿದೆ. ಯೋಜನೆಯಡಿ ನೇಮಕಾತಿಗಾಗಿ ನೋಂದಣಿ ಜೂ.24 ರಂದು ಪ್ರಾರಂಭವಾಗಿ, ಜು.05 ರಂದು ಅಂತ್ಯಗೊಂಡಿತ್ತು. 

ಜೂ.14 ರಂದು ಯೋಜನೆಯನ್ನು ಘೋಷಿಸಿದಾಗ ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ತೀವ್ರವಾದ ಪ್ರತಿಭಟನೆಗಳು ನಡೆದಿದ್ದವು. ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಬಿಹಾರದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಗಿತ್ತು.

ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಐಎಎಫ್ ನಿಂದ ನಡೆಸಲಾಗಿದ್ದ ಆನ್ ಲೈನ್ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಐಎಎಫ್ ಟ್ವೀಟ್ ಮೂಲಕ ತಿಳಿಸಿದೆ. ಈ ಹಿಂದೆ ಗರಿಷ್ಠ 6,31,528 ಅರ್ಜಿಗಳು ಬಂದಿದ್ದು, ಈ ಬಾರಿ 7,49,899 ಅರ್ಜಿಗಳು ಬಂದಿವೆ ಎಂದು ಟ್ವೀಟ್ ಮೂಲಕ ಐಎಎಫ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com