ಎಲ್ಎಸಿಯಾದ್ಯಂತ ಭಾರತೀಯ ಸೇನೆಗಳಿಗೆ ಚೀನಾ 5 ಜಿ ನೆಟ್ವರ್ಕ್ ಉಪಟಳ; ವಿಚಿತ್ರ ಶಬ್ದದಿಂದ ರೇಡಿಯೋ ಸಂವಹನಕ್ಕೆ ಸಮಸ್ಯೆ!

ಭಾರತ-ಚೀನಾ ಗಡಿ ಭಾಗಗಳ ಎಲ್ಎಸಿಯಾದ್ಯಂತ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಚೀನಾದ 5 ಜಿ ನೆಟ್ವರ್ಕ್ ನ ಉಪಟಳ ಹೆಚ್ಚಾಗಿದ್ದು, ರೇಡಿಯೋ ಸಂವಹನಕ್ಕೆ ಸಮಸ್ಯೆಯಾಗುತ್ತಿದೆ. 
ಭಾರತೀಯ ಸೇನೆ (ಸಂಗ್ರಹ ಚಿತ್ರ)
ಭಾರತೀಯ ಸೇನೆ (ಸಂಗ್ರಹ ಚಿತ್ರ)

ನವದೆಹಲಿ: ಭಾರತ-ಚೀನಾ ಗಡಿ ಭಾಗಗಳ ಎಲ್ಎಸಿಯಾದ್ಯಂತ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಚೀನಾದ 5 ಜಿ ನೆಟ್ವರ್ಕ್ ನ ಉಪಟಳ ಹೆಚ್ಚಾಗಿದ್ದು, ರೇಡಿಯೋ ಸಂವಹನಕ್ಕೆ ಸಮಸ್ಯೆಯಾಗುತ್ತಿದೆ.  

ಚೀನಾ ಗಡಿಯ ಪ್ರದೇಶದಲ್ಲಿ 5 ಜಿ ನೆಟ್ವರ್ಕ್ ನ್ನು ಪರಿಚಯಿಸಿದ್ದು, ಎಲ್ಎಸಿಯಾದ್ಯಂತ 5 ಜಿ ತರಂಗಗಳ ಕಾರಣದಿಂದ ಸಂವಹನ ಸಾಧನಗಳಲ್ಲಿ ವಿಚಿತ್ರವಾದ ಶಬ್ದ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ. 

ಈ ವಿಚಿತ್ರ ಶಬ್ದ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. 

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಿಆರ್ ಡಿಒ ಸಹ ಕಾರ್ಯನಿರ್ವಹಿಸುತ್ತಿದ್ದು,  ಕೆ-ಬ್ಯಾಂಡ್ ಫ್ರೀಕ್ವೆನ್ಸಿಯನ್ನು ಬಳಸಿಕೊಳ್ಳುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತೀಯ ಸೇನಾಪಡೆಗಳಿಗಾಗಿಯೇ ಹೊಸ ಉಪಗ್ರಹ ಉಡಾವಣೆ ಮಾಡುವ ಯೋಜನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಈ ಫ್ರೀಕ್ವೆನ್ಸಿ ಸಾಮಾನ್ಯ ಜನತೆ ಅಥವಾ ವಾಣಿಜ್ಯ ಬಳಕೆಗೆ ಮುಕ್ತವಾಗಿರುವುದಿಲ್ಲ. ರಕ್ಷಣಾ ಸೇನೆಗಳಿಗೆ ಮಾತ್ರವೇ ಸೀಮಿತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com