ಯುಎಇಯಿಂದ ವಾಪಸ್ಸಾಗಿದ್ದ ಕೇರಳ ಮೂಲದ ವ್ಯಕ್ತಿಯಲ್ಲಿ ಮೊದಲ ಮಂಕಿಪಾಕ್ಸ್ ಸೋಂಕು ಪತ್ತೆ; ಕೇಂದ್ರದಿಂದ ಉನ್ನತ ಮಟ್ಟದ ತಂಡ ರವಾನೆ

ಕೊರೊನಾ ಕಾಟದ ನಡುವೆ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಿದೆ. ಯುಎಇಯಿಂದ ಹಿಂದಿರುಗಿದ ಕೇರಳ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ಆಗಿರೋದು ದೃಢಪಟ್ಟಿದೆ.
ಮೈಕ್ರೋಸ್ಕೋಪ್ ನಲ್ಲಿ ಮಂಕಿಪಾಕ್ಸ್ ವೈರಾಣು
ಮೈಕ್ರೋಸ್ಕೋಪ್ ನಲ್ಲಿ ಮಂಕಿಪಾಕ್ಸ್ ವೈರಾಣು

ತಿರುವನಂತಪುರಂ: ಕೊರೊನಾ ಕಾಟದ ನಡುವೆ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಿದೆ. ಯುಎಇಯಿಂದ ಹಿಂದಿರುಗಿದ ಕೇರಳ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ಆಗಿರೋದು ದೃಢಪಟ್ಟಿದೆ. ಈ ಮೂಲಕ ಇಡೀ ದೇಶದಲ್ಲೇ ಮೊದಲ ಮಂಕಿಪಾಕ್ಸ್ ಪತ್ತೆಯಾಗಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಇಂದು ತಿಳಿಸಿದ್ದಾರೆ. ರೋಗಿಯು ಜುಲೈ 12 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು ಅವರು ಸ್ಥಿರವಾಗಿದ್ದಾರೆ, ಎಂದು ಹೇಳಿದ್ದಾರೆ.

ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆಯಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಹಾಯ ಮಾಡಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ತಜ್ಞರ ತಂಡವನ್ನು ಕಳುಹಿಸಿದೆ.

ಮಂಕಿಪಾಕ್ಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ರೋಗಿ ಸ್ಥಿರವಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದು ರೋಗಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಿಲ್ಲ.

ರೋಗಿಯ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿದ್ದು ಅವರ ತಂದೆ, ತಾಯಿ, ಟ್ಯಾಕ್ಸಿ ಚಾಲಕ, ಆಟೋ ಚಾಲಕ ಮತ್ತು ಅವರ ಪಕ್ಕದ ಆಸನಗಳಲ್ಲಿದ್ದ 11 ಸಹ ಪ್ರಯಾಣಿಕರನ್ನು ಗುರುತಿಸಲಾಗಿದೆ.

ರೋಗಿಯಲ್ಲಿ ಶಂಕಿತ ಲಕ್ಷಣಗಳು ವರದಿಯಾಗ್ತಿದ್ದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆದಿತ್ತು. ಯುರೋಪ್ ಮತ್ತು ಅಮೆರಿಕಾದಲ್ಲಿನ ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.  ಮಂಕಿಪಾಕ್ಸ್ ಆಫ್ರಿಕಾದ ಹೊರಗೆ ಅಪರೂಪವಾಗಿ ವರದಿಯಾಗಿದೆ.  ಸರ್ಕಾರವು ಮೇ ತಿಂಗಳಲ್ಲಿ ರೋಗಿಗಳ ಪ್ರತ್ಯೇಕತೆ ಮತ್ತು ಸಂಪರ್ಕ-ಪತ್ತೆಹಚ್ಚುವಿಕೆಯ ಬಗ್ಗೆ ಮಾರ್ಗಸೂಚಿಗಳನ್ನು ನೀಡಿತು. ಮಂಕಿಪಾಕ್ಸ್  ದದ್ದುಗಳ ಜೊತೆಗೆ ಜ್ವರ ಲಕ್ಷಣಗಳನ್ನು ಉಂಟುಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com