ಉತ್ತರ ಪ್ರದೇಶ: ಪ್ರಧಾನಿ ಮೋದಿಯಿಂದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಶನಿವಾರ 296 ಕಿ.ಮೀ ಉದ್ದದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿದರು. ಇದು ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮೂಲಕ ಸಾಗಲಿದ್ದು, ಸುಮಾರು 14, 850 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ
ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ

ಜಲೌನ್: ಪ್ರಧಾನಿ ನರೇಂದ್ರ ಮೋದಿ ಶನಿವಾರ 296 ಕಿ.ಮೀ ಉದ್ದದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿದರು. ಇದು ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮೂಲಕ ಸಾಗಲಿದ್ದು, ಸುಮಾರು 14, 850 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಜಿಲ್ಲೆಯ ಒರೈ ತೆಹಸಿಲ್ ನ ಕೈಥೇರಿ ಗ್ರಾಮದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತಿತರರು ಉಪಸ್ಥಿತರಿದ್ದರು. 2020, ಫೆಬ್ರವರಿ 29 ರಂದು ಈ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ್ದರು. 28 ತಿಂಗಳುಗಳಲ್ಲಿ ಇದು ಪೂರ್ಣಗೊಂಡಿದೆ.

 ಚಿತ್ರಕೂಟ ಜಿಲ್ಲೆಯ ಎನ್ ಹೆಚ್ -35 ಗೋಡಾ ಹಳ್ಳಿಯಿಂದ ಇಟಾವಾ ಜಿಲ್ಲೆಯ ಕುದುರೆಲ್ ಗ್ರಾಮದವರೆಗೂ ವಿಸ್ತರಣೆಯಾಗಿದೆ. ಅಲ್ಲಿ ಆಗ್ರಾ- ಲಖನೌ ಎಕ್ಸ್ ಪ್ರೆಸ್ ನೊಂದಿಗೆ ಸೇರಿಕೊಳ್ಳುತ್ತದೆ. ನಾಲ್ಕು ಪಥದ ಎಕ್ಸ್ ಪ್ರೆಸ್ ವೇ ನಂತರ ಆರು ಪಥಗಳಾಗಿ ವಿಸ್ತರಣೆಯಾಗಿದ್ದು, ಚಿತ್ರಕೂಟ, ಬಾಂಡಾ, ಮಹೊಬಾ, ಹಮಿರ್ ಪುರ್, ಜಲೌನ್, ಔರೈಯಾ ಮತ್ತು ಇಟವಾ ನಗರಗಳ ಮೂಲಕ ಸಾಗುತ್ತದೆ.

ಈ ವಲಯದಲ್ಲಿ ಸಂಪರ್ಕ ಸುಧಾರಣೆ ಅಲ್ಲದೇ, ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಲಿದ್ದು, ಸ್ಥಳೀಯ ಜನರಿಗೆ ಸಾವಿರಾರು ಉದ್ಯೋಗ ಸೃಷ್ಟಿಸಲಿದೆ ಎಂಬುದು ಸರ್ಕಾರದ ನಿರೀಕ್ಷೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com