ರಾಜಸ್ಥಾನ: ಅಕ್ರಮ ಗಣಿಗಾರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ಸಾಧು ಆತ್ಮಹತ್ಯೆಗೆ ಯತ್ನ; ಗಂಭೀರ ಸ್ಥಿತಿ!

ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಪಸೋಪಾ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ವಿರೋಧಿಸಿ ಸಾಧುಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಪಸೋಪಾ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ವಿರೋಧಿಸಿ ಸಾಧುಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಸಾಧು 65 ವರ್ಷದ ಬಾಬಾ ವಿಜಯ್ ದಾಸ್ ಎಂಬುವರನ್ನು ಪೊಲೀಸರು ರಕ್ಷಿಸಿದ್ದು 80ರಷ್ಟು ಸುಟ್ಟಗಾಯಗಳಾಗಿದೆ. ಅವರನ್ನು ಭರತ್‌ಪುರದ ರಾಜ್ ಬಹದ್ದೂರ್ ಸ್ಮಾರಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

ಜಿಲ್ಲೆಯ ದೀಗ್ ಪ್ರದೇಶದ ಆದಿಬದ್ರಿ ಧಾಮ್ ಮತ್ತು ಕಂಕಂಚಲ್‌ನಲ್ಲಿ ಅಕ್ರಮ ಗಣಿಗಾರಿಕೆ ವಿರೋಧಿಸಿ ಸಾಧು 550 ದಿನಗಳಿಂದ ಚಳುವಳಿ ನಡೆಸುತ್ತಿದ್ದರು. ಶ್ರೀಕೃಷ್ಣ ಬಾಲ್ಯದಲ್ಲಿ ಆಡುತ್ತಿದ್ದದ್ದು ಇಲ್ಲಿಯೇ ಎಂದು ನಂಬಿರುವ ಸಾಧುಗಳು ಇದು ಭಗವಂತನೊಂದಿಗಿನ ಸಂಪರ್ಕಕ್ಕಾಗಿ ಪ್ರಸಿದ್ಧವಾಗಿರುವ ಬ್ರಜ್ ಪ್ರದೇಶದ ಪವಿತ್ರ ಭಾಗವಾಗಿದೆ.

ಮೂಲಗಳ ಪ್ರಕಾರ, ವಿಜಯ ದಾಸ್ ಪ್ರತಿಭಟನಾ ಸ್ಥಳದ ಹಿಂದೆ ಹೋಗಿ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ನಂತರ ರಾಧೆ-ರಾಧೆ ಎಂದು ಕೂಗಿ ಓಡತೊಡಗಿದರು. ಬೆಂಕಿ ಹೆಚ್ಚುತ್ತಿರುವುದನ್ನು ಕಂಡು ಸ್ಥಳದಲ್ಲಿ ಕೋಲಾಹಲ ಉಂಟಾಗಿದ್ದು, ಅವರನ್ನು ರಕ್ಷಿಸಲು ಕರ್ತವ್ಯದಲ್ಲಿದ್ದ ಪೊಲೀಸರು ಹರಸಾಹಸ ಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com