ರಾಷ್ಟ್ರಪತಿ ಚುನಾವಣೆಗೆ ಲಾಲು ಪ್ರಸಾದ್ ಯಾದವ್ ಸ್ಪರ್ಧೆ, ನಾಮಪತ್ರ ಸಲ್ಲಿಕೆಗೆ ಸಿದ್ಧತೆ
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಹಾರಿಯೊಬ್ಬರು ಸ್ಪರ್ಧಿಸಬೇಕೆಂಬ ನಂಬಿಕೆಯಿಂದ ಲಾಲು ಪ್ರಸಾದ್ ಯಾದವ್ ಸ್ಪರ್ಧಿಸಲು ಯೋಚಿಸಿದ್ದಾರೆ. ಆದರೆ, ಇವರು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅಲ್ಲ.
Published: 12th June 2022 07:02 PM | Last Updated: 13th June 2022 02:20 PM | A+A A-

ಪಾರ್ಲಿಮೆಂಟ್
ಪಾಟ್ನಾ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಹಾರಿಯೊಬ್ಬರು ಸ್ಪರ್ಧಿಸಬೇಕೆಂಬ ನಂಬಿಕೆಯಿಂದ ಲಾಲು ಪ್ರಸಾದ್ ಯಾದವ್ ಸ್ಪರ್ಧಿಸಲು ಯೋಚಿಸಿದ್ದಾರೆ. ಆದರೆ, ಇವರು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅಲ್ಲ.
ಸರನ್ ಜಿಲ್ಲೆಯ ನಿವಾಸಿಯಾದ ಲಾಲು ಪ್ರಸಾದ್ ಯಾದವ್ ಅವರು, ಜೂನ್ 15 ರಂದು ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಅವರು ದೆಹಲಿಗೆ ಟಿಕೆಟ್ ವಿಮಾನ ಕಾಯ್ದಿರಿಸಿದ್ದಾರೆ ಎನ್ನಲಾಗಿದೆ. ಇವರು 2017ರಲ್ಲಿಯೂ ನಾಮಪತ್ರ ಸಲ್ಲಿಸಿದ್ದರು. ಬಿಹಾರ ರಾಜ್ಯಪಾಲರಾಗಿದ್ದ ರಾಮ್ ನಾಥ್ ಕೋವಿಂದ್ ಹಾಗೂ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ನಡುವೆ ಆಗ ಸ್ಪರ್ಧೆ ಏರ್ಪಟ್ಟಿತ್ತು.
ಕಳೆದ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಸೂಚಕರಿಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿತ್ತು. ಈ ಬಾರಿ ಉತ್ತಮ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ತನಗೆ ಏಳು ಮಕ್ಕಳಿದ್ದು, ಜೀವನೋಪಾಯಕ್ಕಾಗಿ ವ್ಯವಸಾಯ ಮಾಡುತ್ತೇನೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಯಾದವ್ ತಿಳಿಸಿದ್ದಾರೆ.