1 ಕೆಜಿ ಅಸ್ಸಾಂ ಟೀ ಪುಡಿ 1 ಲಕ್ಷ ರೂಪಾಯಿಗೆ ಮಾರಾಟ!

ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾ ಒಂದು ಕೆಜಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗುವಾಹಟಿ: ಅಸ್ಸಾಂ ಟೀ ಅಂದ್ರೆ ಚಹಾ ಪ್ರಿಯರಿಗೆ ಅಚ್ಚುಮೆಚ್ಚು. ಅಸ್ಸಾಂ ಟೀ ನ ರುಚಿಗೆ ಮನಸೋತವರಿಲ್ಲ. ಇಂತಹ ವಿಶೋಷ ಹೊಂದಿರುವ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾ ಒಂದು ಕೆಜಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಜೋರ್ಹತ್‌ನ ಹರಾಜು ಕೇಂದ್ರವು ಸೋಮವಾರ ಪ್ರತಿ ಕಿಲೋಗ್ರಾಂಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದು, ಈ ವರ್ಷ ಮಾರಾಟವಾದ ಅತಿ ಹೆಚ್ಚು ಬೆಲೆಯ ಟೀ ಎಂಬ ಹೆಗ್ಗಳಿಕೆ ಪಡೆದಿದೆ. ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡಿದ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ಎಸಾಹ್ ಟೀ ಖರೀದಿಸಿದೆ ಎಂದು ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು ಹೇಳಿದರು.

ಎಸಾಹ್ ಟೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಜಿತ್ ಶರ್ಮಾ ಮಾತನಾಡಿ, ಅಸ್ಸಾಂನ ಅತ್ಯುತ್ತಮ ಚಹಾ ಮಿಶ್ರಣಗಳಲ್ಲಿ ಒಂದನ್ನು ತಮ್ಮ ಗ್ರಾಹಕರಿಗೆ ಒದಗಿಸಲು ಚಹಾ ವೈವಿಧ್ಯವು ಸಹಾಯ ಮಾಡುತ್ತದೆ.

ಈ ಚಹಾ ವೈವಿಧ್ಯವು ಅಪರೂಪ ಮತ್ತು ಚಹಾ ಪ್ರಿಯರಿಗೆ ಇದು ಒಂದು ಕಪ್‌ನಲ್ಲಿನ ಅನುಭವ. ನಮ್ಮ ಗ್ರಾಹಕರು ಪ್ರಪಂಚದಾದ್ಯಂತ ನೆಲೆಸಿದ್ದಾರೆ. ಅವರು ಈ ವಿಧದ ರುಚಿ ಮತ್ತು ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಅಧಿಕೃತ ಅಸ್ಸಾಂ ಚಹಾ ಸುವಾಸನೆಗಳನ್ನು ಒದಗಿಸುವ ನಮ್ಮ ಧ್ಯೇಯವನ್ನು ಮುಂದುವರಿಸಲು ಸಾಧ್ಯವಾಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.

ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್‌ನ ಮಾಲೀಕ ರಾಖಿ ದತ್ತಾ ಸೈಕಿಯಾ ಮಾತನಾಡಿ, ನಾವು ಈ ಅಪರೂಪದ ವಿಧದ ಚಹಾವನ್ನು ಕೇವಲ ಒಂದು ಕೆಜಿ ಉತ್ಪಾದಿಸಿದ್ದೇವೆ ಮತ್ತು ಇತಿಹಾಸವನ್ನು ಸೃಷ್ಟಿಸಿದ ಈ ಹೊಸ ದಾಖಲೆಯ ಬೆಲೆಯಿಂದ ಸಂತೋಷಪಡುತ್ತೇವೆ. ಅದು ಪಡೆದ ಬೆಲೆಯು ಅಸ್ಸಾಂ ಚಹಾ ಉದ್ಯಮವು ಕಳೆದುಹೋದ ಖ್ಯಾತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com