ಸಾಂದರ್ಭಿಕ ಚಿತ್ರ
ದೇಶ
ಕೋವಿಡ್-19: ಭಾರತದಲ್ಲಿ 12,249 ಹೊಸ ಪ್ರಕರಣ, 9,862 ಚೇತರಿಕೆ, 13 ಮಂದಿ ಸಾವು
ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 12,249 ಹೊಸ ಪ್ರಕರಣ ಪತ್ತೆಯಾಗಿದ್ದು 13 ಮಂದಿ ಕಳೆದೊಂದು ದಿನದಲ್ಲಿ ಮೃತಪಟ್ಟಿದ್ದಾರೆ.
ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 12,249 ಹೊಸ ಪ್ರಕರಣ ಪತ್ತೆಯಾಗಿದ್ದು 13 ಮಂದಿ ಕಳೆದೊಂದು ದಿನದಲ್ಲಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 9,862 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟಾರೇ ಗುಣಮುಖರಾದವರ ಸಂಖ್ಯೆ 4,27,25,055ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ದೇಶದಲ್ಲಿ 81 ಸಾವಿರದ 687 ಮಂದಿ ಸಕ್ರಿಯ ಕೋವಿಡ್ ಸೋಂಕಿತರಿದ್ದು, ಪ್ರತಿದಿನ ಸರಾಸರಿ ಶೇಕಡಾ 3.94ರಷ್ಟು ಪಾಸಿಟಿವ್ ದರವಿದೆ.
ಇದುವರೆಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ 52 ಲಕ್ಷದ 4 ಸಾವಿರದ 903 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟಾರೆ 196 ಕೋಟಿಯ 45 ಲಕ್ಷದ 99 ಸಾವಿರದ 906 ಡೋಸ್ ಕೋವಿಡ್ ಲಸಿಕೆಯನ್ನು ದೇಶದ ನಾಗರಿಕರಿಗೆ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ