ಕಾಂಗ್ರೆಸ್, ಎನ್‌ಸಿಪಿ ಜೊತೆಗಿನ ‘ಅಸಹಜ ಮೈತ್ರಿ’ಯನ್ನು ಉದ್ಧವ್ ಠಾಕ್ರೆ ಕಡಿದುಕೊಳ್ಳಬೇಕು: ಏಕನಾಥ್ ಶಿಂಧೆ

ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಒಕ್ಕೂಟವು ‘ಅಸಹಜ ಮೈತ್ರಿಯಾಗಿದ್ದು, ಕೂಡಲೇ ಉದ್ಧವ್ ಠಾಕ್ರೆ ಅದನ್ನು ಕಡಿದುಕೊಳ್ಳಬೇಕು ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಒಕ್ಕೂಟವು ‘ಅಸಹಜ ಮೈತ್ರಿಯಾಗಿದ್ದು, ಕೂಡಲೇ ಉದ್ಧವ್ ಠಾಕ್ರೆ ಅದನ್ನು ಕಡಿದುಕೊಳ್ಳಬೇಕು ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಶಿವಸೇನೆ ಕೂಡಲೇ ಮಹಾ ವಿಕಾಸ್ ಅಘಾಡಿಯ ಅಸಹಜ ಮೈತ್ರಿಯನ್ನು ತೊಡೆದುಕೊಳ್ಳಬೇಕು. ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗಿನ ಒಕ್ಕೂಟದಿಂದ ಹೊರನಡೆಯುವುದು ನಮ್ಮ ಪಕ್ಷ ಮತ್ತು ಕಾರ್ಯಕರ್ತರಿಗೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ನವೆಂಬರ್ 2019ರಲ್ಲಿ ಮಹಾ ವಿಕಾಸ್ ಅಘಾಡಿ ರಚನೆಯಾದಾಗಿನಿಂದ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳಿಗೆ ಮಾತ್ರ ಅನುಕೂಲವಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ಸಾಮಾನ್ಯ ಶಿವಸೈನಿಕರು ತೊಂದರೆಗೆ ಈಡಾಗಿದ್ದಾರೆ. ಶಿವಸೈನಿಕರು ಮತ್ತು ಶಿವಸೇನೆಯ ಹಿತದೃಷ್ಟಿಯಿಂದ ಅಸಹಜ ಮೈತ್ರಿ ಕಡಿದುಕೊಳ್ಳುವುದು ಅವಶ್ಯವಾಗಿದೆ. ರಾಜ್ಯದ ಹಿತದೃಷ್ಟಿಯಿಂದಲೂ ಈ ನಿರ್ಧಾರ ಕೈಗೊಳ್ಳುವುದು ಮುಖ್ಯವಾಗಿದೆ ಎಂದು ಬಂಡಾಯ ಶಾಸಕರ ಜೊತೆ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿಂಧೆ ಟ್ವೀಟ್ ಮಾಡಿದ್ದಾರೆ.

#Hindutvaforever ಎಂಬ ಹ್ಯಾಷ್ ಟ್ಯಾಗ್ ಬಳಸಿ ಮರಾಠಿಯಲ್ಲಿ ಶಿಂಧೆ ಟ್ವೀಟ್ ಮಾಡಿದ್ದು, ಎಂವಿಎ ಒಕ್ಕೂಟದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಬಲವಾಗುತ್ತಿದ್ದರೆ, ಶಿವಸೇನೆ ದುರ್ಬಲವಾಗುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಂಡಾಯ ಬಣದ ಒಬ್ಬ ಶಿವಸೇನೆ ಶಾಸಕ ಬಂದು ತಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಸಮರ್ಥನೆಂದು ಹೇಳಿದರೆ ಸಿಎಂ ಸ್ಥಾನ ತ್ಯಜಿಸುವುದಾಗಿ ಎಂದು ಉದ್ಧವ್ ಠಾಕ್ರೆ ಅವರು ಹೇಳಿದ ಬೆನ್ನಲ್ಲೇ ಶಿಂಧೆ ಈ ಹೇಳಿಕೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com