ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಶಿವಸೇನೆ ಮುಕ್ತ- ಕಾಂಗ್ರೆಸ್ 

ಮಹಾರಾಷ್ಟ್ರದ ಮಹಾ ಆಘಾದಿ ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧವಾಗಿದೆ ಎಂಬ ಸಂಜಯ್ ರಾವತ್ ಹೇಳಿಕೆ ಮೈತ್ರಿ ಪಕ್ಷಗಳಾದ ಎನ್ ಸಿಪಿ ಮತ್ತು ಕಾಂಗ್ರೆಸ್ ಗೆ ಅಚ್ಚರಿ ನೀಡಿದ್ದು, ಉಭಯ ಪಕ್ಷಗಳು ತಮ್ಮ ಮುಖಂಡರೊಂದಿಗೆ ಸಭೆ ನಡೆಸುತ್ತಿವೆ.
ಮುಂಬೈ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ
ಮುಂಬೈ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ

ಮುಂಬೈ: ಮಹಾರಾಷ್ಟ್ರದ ಮಹಾ ಆಘಾದಿ ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧವಾಗಿದೆ ಎಂಬ ಸಂಜಯ್ ರಾವತ್ ಹೇಳಿಕೆ ಮೈತ್ರಿ ಪಕ್ಷಗಳಾದ ಎನ್ ಸಿಪಿ ಮತ್ತು ಕಾಂಗ್ರೆಸ್ ಗೆ ಅಚ್ಚರಿ ನೀಡಿದ್ದು, ಉಭಯ ಪಕ್ಷಗಳು ತಮ್ಮ ಮುಖಂಡರೊಂದಿಗೆ ಸಭೆ ನಡೆಸುತ್ತಿವೆ.

ಸಂಜಯ್ ರಾವತ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಇಡಿಯಿಂದಾಗಿ ಈ ರಾಜಕೀಯ ಆಟ ಉಂಟಾಗಿದೆ. ಕಾಂಗ್ರೆಸ್ ವಿಶ್ವಾಸಮತಕ್ಕೆ ಸಿದ್ಧವಾಗಿದೆ. ಮಹಾ ಆಘಾದಿ ಸರ್ಕಾರದೊಂದಿಗೆ ನಾವು ಇರುತ್ತೇವೆ. ಒಂದು ವೇಳೆ ಶಿವಸೇನೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು  ನಮಗೇನೂ ತೊಂದರೆ ಇಲ್ಲ ಎಂದಿದ್ದಾರೆ.

ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ವಿಕಾಸ್ ಆಘಾದಿ ಸರ್ಕಾರ ರಚನೆಯಾಯಿತು. ಕೊನೆಯವರೆಗೂ ಉದ್ದವ್ ಠಾಕ್ರೆ ಅವರೊಂದಿಗೆ ನಾವು ಇರುತ್ತೇವೆ ಎಂದು ಎನ್ ಪಿಸಿ ಮುಖಂಡ ಜಯಂತ್ ಪಾಟೀಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com