ಗುವಾಹಟಿ, ಸೂರತ್‌ನಲ್ಲಿ ಹೋಟೆಲ್ ಬಿಲ್ ಯಾರು ಪಾವತಿಸುತ್ತಿದ್ದಾರೆ; ಐಟಿ ಇಲಾಖೆ, ಇಡಿ ಈ ಬ್ಲ್ಯಾಕ್ ಮನಿ ಮೂಲ ಪತ್ತೆ ಮಾಡಬೇಕು: ಎನ್'ಸಿಪಿ
ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವ ನಡುವಲ್ಲೇ ಸೂರತ್ ಹಾಗೂ ಗುವಾಹಟಿಯಲ್ಲಿ ಬಂಡಾಯ ಶಾಸಕರ ಹೋಟೆಲ್ ಬಿಲ್ ಗಳನ್ನು ಯಾರು ಪಾವತಿ ಮಾಡುತ್ತಿದ್ದಾರೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಶನಿವಾರ ಪ್ರಶ್ನೆ ಮಾಡಿದೆ.
ಎನ್'ಸಿಪಿ ಮುಖ್ಯ ವಕ್ತಾರ ಮಹೇಶ್ ತಾಪಸೆ ಅವರು ಮಾತನಾಡಿ, ಸೂರತ್ ಮತ್ತು ಗುವಾಹಟಿಯ ಹೋಟೆಲ್‌ಗಳು ಹಾಗೂ ಚಾರ್ಟರ್ಡ್ ಫ್ಲೈಟ್‌ನ ಬಿಲ್‌ಗಳನ್ನು ಯಾರು ಪಾವತಿಸುತ್ತಿದ್ದಾರೆ? ಕುದುರೆ ವ್ಯಾಪಾರದ ದರ 50 ಕೋಟಿ ರೂಪಾಯಿಗಳು ನಿಜವೇ?" ಇಡಿ ಮತ್ತು ಐಟಿ ತನ್ನ ಕಾರ್ಯದಲ್ಲಿ ಸಕ್ರಿಯಗೊಂಡರೆ ಈ ಕಪ್ಪು ಹಣದ ಮೂಲ ಬಯಲಾಗುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ್ ಶಿಂಧೆ ಬಂಡಾಯವೆದ್ದಿದ್ದು, ವಿಧಾನ ಪರಿಷತ್ ಮತ್ತು ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲೇ 10ಕ್ಕೂ ಹೆಚ್ಚು ಸೇನಾ ಶಾಸಕರೊಂದಿಗೆ ಸೂರತ್‌ಗೆ ತೆರಳಿದ್ದರು. ನಂತರ 26ಕ್ಕೂ ಹೆಚ್ಚು ಶಾಸಕರು ಠಾಕ್ರೆ ವಿರುದ್ಧ ಬಂಡಾಯವೆದ್ದು, ಶಿಂಧೆ ಜೊತೆ ಗುಜರಾತ್‌ಗೆ ತೆರಳಿದ್ದರು. ಇದೀಗ ರೆಬೆಲ್ ಶಾಸಕರನ್ನ ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ಸ್ಥಳಾಂತರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ