'ಮಹಾ ಸಂಘರ್ಷ'; ಶಿವಸೇನಾ ಬಂಡಾಯ ಶಾಸಕರಿಗೆ ‘ವೈ ಪ್ಲಸ್’ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಶಿವಸೇನಾದ 15 ಮಂದಿ ಬಂಡಾಯ ಶಾಸಕರಿಗೆ ‘Y+’ ಶ್ರೇಣಿಯ ಸಿಆರ್‌ಪಿಎಫ್‌ ಭದ್ರತೆ ಒದಗಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎನ್‌ಎನ್ಐ’ ಟ್ವೀಟ್ ಮಾಡಿದೆ.
ಶಿವಸೇನೆ ರೆಬೆಲ್ ಶಾಸಕರು
ಶಿವಸೇನೆ ರೆಬೆಲ್ ಶಾಸಕರು

ಮುಂಬೈ: ಕೇಂದ್ರ ಸರ್ಕಾರವು ಶಿವಸೇನಾದ 15 ಮಂದಿ ಬಂಡಾಯ ಶಾಸಕರಿಗೆ ‘Y+’ ಶ್ರೇಣಿಯ ಸಿಆರ್‌ಪಿಎಫ್‌ ಭದ್ರತೆ ಒದಗಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎನ್‌ಎನ್ಐ’ ಟ್ವೀಟ್ ಮಾಡಿದೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ರಾಜಕೀಯ ಮುಖಂಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಇಂಬು ನೀಡುವಂತೆ ಸರ್ಕಾರ ಉಳಿಸಿಕೊಳ್ಳುವುದರ ಜತೆಗೆ ಬಂಡಾಯ ಶಾಸಕರು ಬಿಸಿ ಮುಟ್ಟಿಸಲು ಮುಂದಾಗಿದ್ದ ಸಿಎಂ ಉದ್ಧವ್ ಠಾಕ್ರೆ ಶಾಸಕರಿಗೆ ಹಾಗೂ ಅವರ ಕುಟುಂಬದವರಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಹೀಗಾಗಿ ರೆಬೆಲ್ ಶಾಸಕರ ಭದ್ರತೆ ಆತಂಕಕ್ಕೀಡಾಗಿತ್ತು. ಠಾಕ್ರೆ ಅವರ ಈ ಕ್ರಮ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 

ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ ಇದೀಗ ಶಿವಸೇನಾದ 15 ಮಂದಿ ಬಂಡಾಯ ಶಾಸಕರಿಗೆ ‘Y+’ ಶ್ರೇಣಿಯ ಸಿಆರ್‌ಪಿಎಫ್‌ ಭದ್ರತೆ ಒದಗಿಸಿದೆ.  ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂಧೆ ನೇತೃತ್ವದ 40ಕ್ಕೂ ಹೆಚ್ಚು ಶಾಸಕರ ತಂಡ ಗುವಾಹಟಿಯ ರ್‍ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಬೀಡುಬಿಟ್ಟಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com