
ಸಂಗ್ರಹ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲಕ ಓರ್ವ ನುಸುಳುಕೋರರನ್ನು ಭಾರತೀಯ ಸೇನೆ ಸೋಮವಾರ ಮುಂಜಾನೆ ಹೊಡೆದುರುಳಿಸಿದೆ.
ಬೆಳಗಿನ ಜಾವ 4 ಗಂಟೆಗೆ ಆರ್‌ಎಸ್ ಪುರ ಸೆಕ್ಟರ್‌ನ ಅಂತರಾಷ್ಟ್ರೀಯ ಗಡಿಯುದ್ದಕ್ಕೂ ಬಾದರ್‌ಪುರ ಬಾರ್ಡರ್ ಔಟ್ ಪೋಸ್ಟ್ (ಬಿಒಪಿ) ಬಳಿ ನುಸುಳುಕೋರರ ಚಲನವಲನವನ್ನು ಪತ್ತೆಹಚ್ಚಿ ಸೇನಾಪಡೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಪಾಕಿಸ್ತಾನ ಮೂಲದ ನುಸುಳುಕೋರ ಹತ್ಯೆಯಾಗಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕನ ಬಂಧನ, ಶಸ್ತ್ರಾಸ್ತ್ರಗಳ ವಶ
Two days ahead of Amarnath Yatra, a Pakistani intruder was shot dead near the international border in the RS Pura sector of Jammu by BSF, in Jammu and Kashmir, said a senior BSF officer.
— ANI (@ANI) June 27, 2022
ಹತ್ಯೆಯಾದ ನುಸುಳುಕೋರನ ಮೃತದೇಹ ಈಗಲೂ ಗಡಿ ಬಳಿಯೇ ಇದ್ದು, ಸ್ಥಳಕ್ಕೆ ತೆರಳಿರುವ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.